Advertisement

ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ: ಸರಕಾರಕ್ಕೆ ಮುಜುಗರ ತಂದಿಟ್ಟ ಈಶ್ವರಪ್ಪ

07:15 PM Jan 06, 2022 | Team Udayavani |

ಬೆಂಗಳೂರು : ಶಿವಮೊಗ್ಗದಲ್ಲಿ ನಾನು 3 ದಿನ ಇದ್ದೆ, ಅಲ್ಲಿ ನೈಟ್ ಕರ್ಫ್ಯೂ ಇಲ್ಲ ಸುಡುಗಾಡು ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿ ಸರಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಒಂದೇ ರೀತಿ ನಿಯಮ ಇಲ್ಲ. ಶಿವಮೊಗ್ಗ ದಲ್ಲಿ ನಾನು 3 ದಿನ ಇದ್ದೆ ಅಲ್ಲಿ ನೈಟ್ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ ಎಂದರು.

ಪ್ರಕರಣ ಹೆಚ್ಚು ಇರುವ ಕಡೆ ಬಿಗಿ ನಿಯಮ ಮಾಡಿ. ಬೇರೆ ಕಡೆ ಬಿಡಿ. ಇದು ಜನರ ಭಾವನೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ ಎಂದಿದ್ದಾರೆ.

ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಗೆ ವಿರೋಧ ವ್ಯಕ್ತಪಡಿಸಿದ್ದ ಈಶ್ವರಪ್ಪ ಬೆಂಗಳೂರಿನಲ್ಲಿ ನಿಯಮ ಬಿಗಿ ಇರಲಿ ಕೋವಿಡ್ ಕಡಿಮೆ ಇರುವಲ್ಲಿ ಬಿಗಿ ನಿಯಮ ಬೇಡ ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next