ಬೆಂಗಳೂರು: ಬಜೆಟ್‌ನಲ್ಲಿ ಸಾಲ ಮನ್ನಾ ಮತ್ತಿತರ ಬಾಬ್ತುಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ, ಹಿಂದಿನ ಆರ್ಥಿಕ ವರ್ಷದಲ್ಲಿ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಹಣವನ್ನು ಸರಿಯಾಗಿ ಬಳಕೆ ಮಾಡದೇ ಇರುವುದು ಬೆಳಕಿಗೆ ಬಂದಿದೆ.
2016-17ನೇ ಸಾಲಿನಲ್ಲಿ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ್ದ 13,007 ಕೋಟಿ ರೂ.ಬಳಕೆಯಾಗದೆ ವಾಪಸ್ ಮಾಡಿರುವುದು ಸಿಎಜಿ ವರದಿಯಿಂದ ಬಹಿರಂಗಗೊಂಡಿದೆ.
2016-17ನೇ ಸಾಲಿನಲ್ಲಿ ರಾಜ್ಯದ ಬಜೆಟ್ 1,86,052 ಕೋಟಿ ರೂ. ಪೈಕಿ 1,73,045 ಕೋಟಿ ರೂ.ಬಳಕೆಯಾಗಿದ್ದು, ಉಳಿದ 13,007 ಕೋಟಿ ಅಂದರೆ, ಒಟ್ಟು ಬಜೆಟ್‌ನ ಶೇ.7ರಷ್ಟು ಹಣ ಬಳಕೆಯಾಗದೆ ಉಳಿದುಕೊಂಡಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ ಅನುದಾನದಲ್ಲಿ 1381 ಕೋಟಿ ರೂ.ಬಳಕೆಯಾಗದಿರುವುದು. ಅಲ್ಪಸಂಖ್ಯಾತ ನಿರ್ದೇಶನಾಲಯಕ್ಕೆ ಬಿಡುಗಡೆ ಮಾಡಿದ್ದ ಅಲ್ಪ ಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ 260 ಕೋಟಿ ರೂ.ಗಳನ್ನು ವೈಯಕ್ತಿಕ ಠೇವಣಿಯಲ್ಲಿ ಇಟ್ಟಿರುವುದು ನಷ್ಟಕ್ಕೆ ಕಾರಣವಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಅರಣ್ಯ ಮತ್ತು ಜೀವಿಶಾಸOಉ ಇಲಾಖೆಯಲ್ಲಿ 146 ಕೋಟಿ ರೂ. ಸಮಾಜ ಕಲ್ಯಾಣ ಇಲಾಖೆಯಲ್ಲಿ 411 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 186 ಕೋಟಿ ರೂ.,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 170 ಕೋಟಿ ರೂ., ವಸತಿ ಇಲಾಖೆಯಲ್ಲಿ 259 ಕೋಟಿ ರೂ., ಶಿಕ್ಷಣ ಇಲಾಖೆಯಲ್ಲಿ 974 ಕೋಟಿ ರೂ. ಬಳಕೆಯಾಗದೆ ಉಳಿದಿದೆ ಎಂದು ಸಿಎಜಿ ವರದಿಯಲ್ಲಿ ಪತ್ತೆ ಹಚ್ಚಲಾಗಿದೆ.