Advertisement

ಮೈಸೂರು ತಾಲೂಕಿನ 14 ಹಳ್ಳಿಗಳಿಗೆ ಸೋಂಕಿಲ್ಲ

05:37 PM Jun 02, 2021 | Team Udayavani |

ಮೈಸೂರು: ಗ್ರಾಮೀಣ ಭಾಗದಲ್ಲೇ ಹೆಚ್ಚುಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ನಡುವೆ ಮೈಸೂರು ತಾಲೂಕಿನ 14ಗ್ರಾಮಗಳಲ್ಲಿ ಕೋವಿಡ್‌ ಪ್ರಕರಣಶೂನ್ಯವಾಗಿದ್ದು, ಕೋವಿಡ್‌ಗೆ ಪ್ರವೇಶನೀಡದ ಹಳ್ಳಿಗಳು ಎಂಬ ಹೆಗ್ಗಳಿಕೆಗೆಪಾತ್ರವಾಗಿದೆ ಎಂದು ತಾಪಂ ಇಒ ಎಂ.ಎಸ್‌. ರಮೇಶ್‌ ತಿಳಿಸಿದ್ದಾರೆ.

Advertisement

ಮೈಸೂರು ತಾಲೂಕು ವ್ಯಾಪ್ತಿಗೆಒಳಪಡುವ 37 ಗ್ರಾಮ ಪಂಚಾಯತಿಗಳಲ್ಲಿ11 ಗ್ರಾಮ ಪಂಚಾಯತಿಗೆ ಸೇರುವ14 ಗ್ರಾಮಗಳಲ್ಲಿ ಇದುವರೆಗೂ ಒಂದೂಕೋವಿಡ್‌ ಪ್ರಕರಣಗಳು ದಾಖಲಾಗದೆಕೊರೊನಾ ಮುಕ್ತವಾಗಿದ್ದು, ಇದು ಇತರೆಹಳ್ಳಿಗಳಿಗೆ ಮಾದರಿಯಾಗಿದೆ. ತಾಲೂಕಿನಮಾದಗಳ್ಳಿ, ರಾಯನಕೆರೆ, ಕಟ್ಟೆಹುಂಡಿ,ಕುಂಬ್ರಳ್ಳಿ, ಚಿಕ್ಕೇಗೌಡನಹುಂಡಿ, ಕೃಷ್ಣಪುರ,ರಾಮನಹಳ್ಳಿ, ಗುಡುಮಾದನಹಳ್ಳಿ,ಇನಮ್‌ ಉತ್ತನಹಳ್ಳಿ, ಲಕ್ಷಿ ¾àಪುರ, ಮಾಕನಹುಂಡಿ, ಹಂಚ್ಯಾಹುಂಡಿ, ಹೊಸಹುಂಡಿ,ಗುರುಕಾರಪುರ ಗ್ರಾಮಗಳು ಕೊರೊನಾಸೋಂಕಿಗೆ ಪ್ರವೇಶ ನೀಡದಗ್ರಾಮಗಳಾಗಿವೆ ಎಂದು ತಿಳಿಸಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರಹೊರಡಿಸಿರುವ ಮಾರ್ಗಸೂಚಿಯಜೊತೆಗೆ ಗ್ರಾಮಸ್ಥರೂ ಕೂಡ ಸ್ವಂ ಮಾರ್ಗಸೂಚಿಗಳನ್ನು ಕಟ್ಟನಿಟ್ಟಾಗಿ ಪಾಲಿಸಿದಫ‌ಲವಾಗಿ ಈ ಗ್ರಾಮಗಳು ಕೋವಿಡ್‌ಸೋಂಕಿನಿಂದ ದೂರ ಉಳಿದವು. ಇಲ್ಲಿನಜನರು ಸಾರ್ವಜನಿಕ ಸಮಾರಂಭಗಳಲ್ಲಿಭಾಗಿಯಾಗದೆ ಇರುವುದು, ಅಗತ್ಯವಿದ್ದರೆಮಾತ್ರ ಮನೆಯಿಂದ ಹೊರಗೆಹೋಗುವುದು, ವ್ಯಕ್ತಿಗಳಿಂದ ಅಂತರಕಾಪಾಡಿಕೊಳ್ಳುವುದು, ಕಡ್ಡಾಯವಾಗಿಮಾಸ್ಕ್ ಧರಿಸುವುದು ಸೇರಿದಂತೆ ಅನೇಕಕಟ್ಟುನಿಟ್ಟಿನ ಮಾರ್ಗಸೂಚಿ ಪಾಲನೆಮಾಡಿದ ಪರಿಣಾಮದಿಂದಾಗಿ ಕೋವಿಡ್‌ಈ ಗ್ರಾಮಗಳಿಗೆಕಾಲಿಡಲಿಲ್ಲ ಎಂದಿದ್ದಾರೆ.

ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರು ಹಾಗೂ ಆರೋಗ್ಯಸಿಬ್ಬಂದಿಚುರುಕಾಗಿಕೆಲಸಮಾಡುತ್ತಿದ್ದಾರೆ.ಪ್ರತಿನಿತ್ಯ ಗ್ರಾಮದ ಮನೆ ಮನೆಗೆ ತೆರಳಿಪಲ್ಸ ಆಕ್ಸಿಮೀಟರ್‌,ಥರ್ಮಲ್‌ ಸ್ಕ್ರೀನಿಂಗ್‌ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾವಹಿಸುತ್ತಿದ್ದಾರೆ. ಸೋಂಕಿನ ಲಕ್ಷಣಕಂಡುಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದುಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next