ಮುಂಬೈ: ಕಳೆದ 5 ವರ್ಷಗಳಲ್ಲಿ ದೇಶಾದ್ಯಂತ ಸುಮಾರು 2.8 ಮಿಲಿಯನ್ ಯೂನಿಟ್ ಅಥವಾ 6 ಲಕ್ಷ ಲೀ. ರಕ್ತವನ್ನು ಪೋಲು ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ವಿಚಿತ್ರವೆಂದರೆ, ರಕ್ತವನ್ನು ಹೆಚ್ಚು ಪೋಲು ಮಾಡುವ ರಾಜ್ಯಗಳಲ್ಲಿ ಕರ್ನಾಟಕವೂ ಮುಂಚೂಣಿಯಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡುಗಳ ಬ್ಲಿಡ್ ಬ್ಯಾಂಕ್‌ಗಳೂ ಹೆಚ್ಚಿನ ಪ್ರಮಾಣದ ರಕ್ತವನ್ನು ಸುಖಾಸುಮ್ಮನೆ ಪೋಲು ಮಾಡುತ್ತಿವೆ ಎಂಬುದು ಬಹಿರಂಗವಾಗಿದೆ.
6 ಲಕ್ಷ ಲೀ. ರಕ್ತ ಎಂದರೆ, ಸುಮಾರು 53 ವಾಟರ್ ಟ್ಯಾಂಕ್‌ಗಳಲ್ಲಿ ತುಂಬಿಡುವಷ್ಟು ರಕ್ತ. ಈ ಪ್ರಮಾಣದ ರಕ್ತ ಹಾಳಾಗಲು ಕಾರಣ, ದೇಶದಲ್ಲಿ ಉತ್ತಮವಾದ ಸ್ಟೋರೇಜ್ ವ್ಯವಸ್ಥೆ ಇಲ್ಲದಿರುವುದು. ಅಂದರೆ, ಬ್ಲಿಡ್ ಬ್ಯಾಂಕ್‌ಗಳಲ್ಲಿ ಸೂಕ್ತ ನಿರ್ವಹಣಾ ವ್ಯವಸ್ಥೆ ಇಲ್ಲದಿರುವುದೇ ಆಗಿದೆ ಎಂದು ಹೇಳಲಾಗುತ್ತಿದೆ.
2016-17ರಲ್ಲೇ ಸುಮಾರು 6.57 ಲಕ್ಷ ಯೂನಿಟ್ ರಕ್ತ ಮತ್ತು ಇದರ ಸಂಬಂಧಿತ ವಸ್ತುಗಳು ಹಾಳಾಗಿವೆ. ಆಘಾತಕಾರಿ ವಿಚಾರ ವೆಂದರೆ, ಒಂದು ವರ್ಷದ ವರೆಗೆ ಕಾಪಿಡ ಬಹುದಾದ ಪ್ಲಾಸ್ಮಾವನ್ನೂ ಹೆಚ್ಚಿನ ಪ್ರಮಾಣ ದಲ್ಲಿ ವ್ಯರ್ಥವಾಗಲು ಬಿಡಲಾಗು ತ್ತಿದೆ. ಇನ್ನು ಕೇವಲ 35 ದಿನಗಳ ವರೆಗೆ ಸಂಗ ಹಿಸಿ ಇಡಬಹುದಾದ ರಕ್ತ ಕೂಡ ಹಾಳಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರ ಸಿಕ್ಕಿದ್ದು, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಅತಿ ಹೆಚ್ಚಿನ ಪ್ರಮಾಣದ ಪ್ಲಾಸ್ಮಾವನ್ನು ಹಾಳಾಗಲು ಬಿಡುತ್ತಿವೆ. 2016-17ರಲ್ಲೇ ಈ ಎರಡೂ ರಾಜ್ಯಗಳು 3 ಲಕ್ಷ ಯೂನಿಟ್ ರಕ್ತ ಹಾಳಾ ಗಲು ಬಿಟ್ಟಿವೆ. ಇನ್ನೂ ವಿಚಿತ್ರವೆಂದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ 3 ಲಕ್ಷ ಮಿಲಿಯನ್ ಯೂನಿಟ್ ರಕ್ತದ ಕೊರತೆಯುಂಟಾಗಿ, ಜನ ಸಾಯುತ್ತಿದ್ದಾರೆ. ಅದರಲ್ಲೂ ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್ ಸಿಗದೇ ಹೆಚ್ಚಿನವರು ಮೃತಪಟ್ಟಿದ್ದಾರೆ.