Advertisement

ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಅಂಗೀಕಾರ: ಆರ್‌ಸಿ

04:22 PM Dec 03, 2020 | Suhan S |

ಬೀದರ: ಅವಿಶ್ವಾಸ ಪ್ರಸ್ತಾವದ ವಿರುದ್ಧ ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಅವರು ಸಲ್ಲಿಸಿದ ಅರ್ಜಿಯನ್ನು ಕಲಬುರಗಿ ಹೈಕೋರ್ಟ್‌ ಪೀಠ ವಜಾಗೊಳಿಸಿದ್ದು, ಇದರೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಕಾನೂನು ಸಮರ ಕೊನೆಗೊಂಡಂತಾಗಿದೆ.

Advertisement

ಅವಿಶ್ವಾಸ ಪ್ರಸ್ತಾವ ಮಂಡನೆಗೆ ಅ.23ರಂದು ನಡೆದ ವಿಶೇಷ ಸಭೆಯಲ್ಲಿನ ತೀರ್ಮಾನವನ್ನು ಹೈಕೋರ್ಟ್‌ ಸೂಚನೆಯಂತೆ ಮುಚ್ಚಿದ ಲಕೋಟೆಯಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ನೀಡಲಾಗಿತ್ತು. ಪ್ರಾದೇಶಿಕ ಆಯುಕ್ತರು ಹೈಕೋರ್ಟ್‌ ಸೂಚನೆಯಂತೆ ಈ ಲಕೋಟೆಯನ್ನು ತೆರೆದು, ಫಲಿತಾಂಶ ಪ್ರಕಟಿಸಿದ್ದಾರೆ.

ಅವಿಶ್ವಾಸ ಪ್ರಸ್ತಾವ ಮಂಡನೆಗೆ ನಡೆದ ವಿಶೇಷ ಸಭೆಯಲ್ಲಿ ಜಿಲ್ಲಾ ಪಂಚಾಯತಿಯ 34 ಸದಸ್ಯರ ಪೈಕಿ 24 ಸದಸ್ಯರು ಅಧ್ಯಕ್ಷರ ವಿರುದ್ಧದ ಪ್ರಸ್ತಾವನ್ನು ಬೆಂಬಲಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪರವಾಗಿ ಯಾರೂ ಮತ ಚಲಾಯಿಸಿಲ್ಲ. ನಿಯಮ 9ರಲ್ಲಿ ತಿಳಿಸಿರುವಂತೆ ಮೂರನೇ ಎರಡು ಭಾಗಕ್ಕಿಂತ ಕಡಿಮೆ ಇಲ್ಲದ ಸದಸ್ಯರ ಅಂದರೆ 23ಕ್ಕಿಂತ ಅಧಿಕ ಸಂಖ್ಯೆಯ ಮತಗಳು ಚಲಾವಣೆಯಾಗಿರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ಸೂಚನೆಯನ್ನು ಅಂಗೀಕರಿಸಲಾಗಿದೆ.

ಹಾಗಾಗಿ ಬೀದರ ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ತೆರವಾಗಿವೆ ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಿಸಿದ್ದಾರೆ.

ಕ್ಷಯರೋಗ ನಿರ್ಮೂಲನೆಗೆ ಶ್ರಮಿಸಿ: ನಿರಗುಡೆ :

Advertisement

ಭಾಲ್ಕಿ: ಜಗತ್ತಿನಲ್ಲಿ ಸಂಪೂರ್ಣ ಕ್ಷಯರೋಗ ನಿರ್ಮೂಲನೆಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ| ಜ್ಞಾನೇಶ್ವರ ನಿರಗುಡೆ ಹೇಳಿದರು.

ಪಟ್ಟಣದ ಸಾರ್ವಜನಿಕಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2025ರ ವೇಳೆಗೆ ಸಂಪೂರ್ಣ ಕ್ಷಯರೋಗ ನಿರ್ಮೂಲನೆ ಮಾಡಬೇಕುಎನ್ನುವುದು ಆರೋಗ್ಯ ಇಲಾಖೆಯಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಆರೊಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಅವಿರತ ಶ್ರಮಿಸಬೇಕಾಗಿದೆ ಎಂದರು.

ಆರೋಗ್ಯ ಕೇಂದ್ರ ನಿಟ್ಟೂರಿನ ಆಡಳಿತ ವೈದ್ಯಾಧಿಕಾರಿ ಡಾ| ಶರಣಪ್ಪಾ ಮುಡಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ಓಂಕಾರ, ಸೂರ್ಯಕಾಂತ, ಕಮಲಾ, ರಾಜು, ರವೀಂದ್ರ, ರಾಹುಲ್‌ ಗಾದಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next