Advertisement

ಮಹಾರಾಷ್ಟ್ರ ಮೈತ್ರಿ ಬಗ್ಗೆ ನೋ ಕಾಮೆಂಟ್ : ದಿನೇಶ್ ಗುಂಡೂರಾವ್

09:38 AM Nov 13, 2019 | Team Udayavani |

ವಿಜಯಪುರ: ಮಾಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಕಾಂಗ್ರೆಸ್ ಹೊಂದಾಣಿಕೆ ವಿಚಾರ‌ ಎಐಸಿಸಿ‌ ಮಟ್ಟದಲ್ಲಿ ನಡೆದಿರುವ ಚರ್ಚೆ. ಹೀಗಾಗಿ ಈ ಕುರಿತು ಪ್ರತಿಕ್ರಯಿಸಲಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ವಾಧಿಕಾರಿ ಧೋರಣೆಯ ಪಕ್ಷ ಎಂಬುದು ಈಗ ಮೈತ್ರಿ ಪಕ್ಷಗಳಿಗೆ ಮನವರಿಕೆ ಆಗತೊಡಗಿದೆ. ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಬಿಜೆಪಿ ಈಗ ಮೈತ್ರಿ ಮುರಿದುಕೊಂಡಿದ್ದಾರೆ ಎಂದು ದೂರಿದರು. ಬಿಜೆಪಿ ಕೋಮುವಾದಿ ಅಷ್ಟೆ ಅಲ್ಲ, ಅದು ಸರ್ವಾಧಿಕಾರಿ ಪಕ್ಷ ಎಂದು ಹರಿಹಾಯ್ದರು.

ರಾಜ್ಯದ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಳಂಬ ಆಗಿಲ್ಲ.‌ ಕೆಲವು ಕ್ಷೇತ್ರಗಳಲ್ಲಿ ಸುಪ್ರೀಂಕೋರ್ಟ್ ನಿರ್ಣಯ ನೋಡಿ ತೀರ್ಮಾನ ಮಾಡಲು ನಿರ್ಧರಿಸಲಾಗಿದೆ.  ನಾಳೆ ತೀರ್ಪು ಬರಲಿದ್ದು, ನಾಳೆ ರಾತ್ರಿಯೇ ಅಭ್ಯರ್ಥಿಗಳನ್ನು ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎಂದರು.

ಸೋಮವಾರ ನಡೆದ ಸಭೆಯಲ್ಲಿ ಯಾವ ಮಾತಿನ ಚಕಮಕಿ ಆಗಿಯೇ ಇಲ್ಲ. ಊಹಾಪೂಹ,‌ ಕಪೋಕಲ್ಪಿತ. ಮಾಧ್ಯಮಗಳು ರೋಚಕತೆಗಾಗಿ ಹೆಡ್ ಲೈನ್ ಹಾಕಿದ್ದಕ್ಕೆಲ್ಲ ನಾವು ಪ್ರತಿಕ್ರಿಯಿಸಲಾರೆ ಎಂದರು.

ಬಿಜೆಪಿಗೆ ಇನ್ನಷ್ಟು ಶಾಸಕರು ಬರೋದಾಗಿ ಸಿಟಿ ರವಿ ಹೇಳಿರುವ ವಿಚಾರದಲ್ಲಿ ಮಾತನಾಡಿದ ಅವರು, ನಿಮ್ಮ ಪಕ್ಷದವರು ಮಾತ್ರ ಇಂಥ ಹೇಳಿಕೆ ನೀಡಲು ಸಾಧ್ಯ. ಬಿಜೆಪಿಗೆ ಬರೀ ಪಕ್ಷಾಂತರ ಮಾಡಿಸೋದೆ ನಿಮ್ಮ ಕೆಲಸ‌ ಆಗಿದೆ. ನಿಮ್ಮ ಉಡಾಫೆ ಮಾತಿಗೆ ಜನ ನಿಮ್ಮ‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹದಿನೈದು ಶಾಸಕರನ್ನು‌ ಮೂರು ದಿನದಲ್ಲಿ‌ ಮಂತ್ರಿ‌ ಮಾಡ್ತಿವಿ ಅಂತ ನಂಬಿಸಿದ್ದರು. ಈಗ ಅವರ ಸ್ಥಿತಿ ಏನಾಗಿದೆ, ಹೀಗೆ ಮಾಡೋದೆ ಬಿಜೆಪಿ ಕೆಲಸ ಎಂದು ವಾಗ್ದಾಳಿ ನಡೆಸಿದರು.

Advertisement

ಬಿಜೆಪಿಯವರಿಗೆ ಕೇಂದ್ರದಿಂದ ಹಣ ತರೋ ತಾಕತ್ತಿಲ್ಲ, ಬರೀ ಮಾತಾಡ್ತಾರೆ. ಇವತ್ತಿನ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next