Advertisement

ಪ್ರತಿಷ್ಠೆಗಾಗಿ ಕೋರ್ಸ್‌ ಆಯ್ಕೆ ಸಲ್ಲ

12:17 PM Nov 25, 2017 | Team Udayavani |

ಹುಬ್ಬಳ್ಳಿ: ಸಾಧಿಸಬೇಕೆಂಬ ಛಲದಿಂದಲೇ ವೃತ್ತಿ ಅಥವಾ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಬೇಕೇ ವಿನಃ ಕೇವಲ ಪ್ರತಿಷ್ಠೆಗಾಗಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ಕ್ಯಾ| ಸಿ.ಎಸ್‌. ಆನಂದ ಹೇಳಿದರು. 

Advertisement

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳ ಸಂಘದ ಹುಬ್ಬಳ್ಳಿ ಶಾಖೆ ಆಶ್ರಯದಲ್ಲಿ ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದ ದೇಶಪಾಂಡೆ ಫೌಂಡೇಶನ್‌ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳ ಸಮ್ಮೇಳನ “ಚೈತನ್ಯ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುಸ್ತಕ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನ ಹೊಂದಿರುವುದು ಅವಶ್ಯ ಎಂದು ತಿಳಿಸಿದರು. ಲೆಕ್ಕ ಪರಿಶೋಧಕ ಕೋರ್ಸ್‌ ಮ್ಯಾರಥಾನ್‌ ಇದ್ದಂತೆ. ಈ ಕೋರ್ಸ್‌ ಪರಿಪೂರ್ಣವಾಗಿ ಪೂರೈಸುತ್ತೇನೆ ಎಂಬ ಅರಿವಿನ ಕಿಚ್ಚು ಹೊತ್ತದಿದ್ದರೆ ಈ ಓಟದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.

ಹೀಗಾಗಿ ಯಾವುದೇ ವೃತ್ತಿ ಅಥವಾ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸಂಪೂರ್ಣ ಮಾಹಿತಿ ಪಡೆದು ಹಿರಿಯರೊಂದಿಗೆ ಚರ್ಚಿಸಿ ಒಂದಿಷ್ಟು ವಿಷಯ ಸಂಗ್ರಹಿಸಿ ನಿರ್ಧರಿಸುವುದು ಸೂಕ್ತ. ಪ್ರತಿಷ್ಠೆ ಅಥವಾ ಇನ್ನಾವುದೋ ಕಾರಣಕ್ಕೆ ಆಯ್ಕೆ ಮಾಡಿಕೊಂಡರೆ ಯಶಸ್ವಿಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. 

ವಿದ್ಯಾರ್ಥಿಗಳು ತಮ್ಮ ವಯಸ್ಸಿನಲ್ಲಿ ಗುರಿ ಸಾಧನೆಯೊಂದನ್ನು ಬಿಟ್ಟು ಬೇರೆ ಯಾವುದೇ ವಿಷಯ ಕುರಿತು ಚಿಂತಿಸಬಾರದು. ಪ್ರತಿಯೊಬ್ಬರೂ ಪ್ರಾಮಾಣಿಕ ಜೀವನ ನಡೆಸಬೇಕು, ಹಣವಂತರಾಗಬೇಕು, ಬುದ್ಧಿವಂತರಾಗಬೇಕು, ಆರೋಗ್ಯ  ವಂತಾಗಬೇಕು ಅಂದಾಗ ಮಾತ್ರ ರಾಷ್ಟ್ರ ಬಲಾಡ್ಯವಾಗಲು ಸಾಧ್ಯ.

Advertisement

ಸಾಧನೆಗೆ ಇರುವ ವಿಫ‌ುಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ಯಾವುದೇ ರೀತಿಯ ಒಪ್ಪಂದಗಳಿಗೆ ಒಳಗಾಗಿ ತತ್ವಾದರ್ಶಗಳನ್ನು ಬಲಿಕೊಡಬಾರದು ಎಂದರು. ಪ್ರಚೋದನಾ ಭಾಷಣ ಮಾಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಘಟನೆಗಳು ಹೆಚ್ಚಾಗುತ್ತಿವೆ.

ಮತ್ತೂಬ್ಬರಿಗೆ ಜೈಕಾರ ಹಾಕಿ, ಮತ್ತೂಬ್ಬರ ಜೀವನ ನಿರ್ಮಿಸಲು ಹೋರಾಡುವ ಬದಲು ತಮ್ಮ ಜೀವನ ಸುಭದ್ರವಾಗಿ ನಿರ್ಮಿಸಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ತಮಗಷ್ಟೇ ಜೀವಿಸುವುದಕ್ಕಾಗಿ ಜನಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಮ್ಮನ್ನು ಸಾಕಿ, ಸಲುಹಿದ ತಂದೆ- ತಾಯಿಗಳನ್ನು ಸುಖವಾಗಿ ನೋಡಿಕೊಳ್ಳುವ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ. ಲೆಕ್ಕ ಪರಿಶೋಧಕರ ಸಂಘದ ನಂದರಾಜಖಟಾವಕರ, ಉಪಾಧ್ಯಕ್ಷ ರಾಘವೇಂದ್ರ ಜೋಶಿ, ಲೆಕ್ಕಪರಿಶೋಧಕ ನಟರಾಜ್‌ ಮೂರಶಿಳ್ಳಿ, ಕಾರ್ತಿಕ ಶೆಟ್ಟಿ, ಕೆ.ವಿ.ದೇಶಪಾಂಡೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next