Advertisement

ಡೆಬಿಟ್‌ ಕಾರ್ಡ್‌ಗೆ 2 ಸಾವಿರ ರೂ.ವರೆಗೆ ಶುಲ್ಕ ವಿನಾಯ್ತಿ

09:10 AM Jan 02, 2018 | Team Udayavani |

ಹೊಸದಿಲ್ಲಿ: ಹೊಸ ವರ್ಷದ ಕೊಡುಗೆಯೆಂಬಂತೆ, ಇನ್ನು ಮುಂದೆ ಡೆಬಿಟ್‌ ಕಾರ್ಡ್‌, ಭೀಮ್‌ ಆ್ಯಪ್‌ ಮೂಲಕ ಮಾಡುವ 2 ಸಾವಿರ ರೂ.ವರೆಗಿನ ವಹಿವಾಟಿಗೆ ‘ವಹಿವಾಟು ಶುಲ್ಕ’ ಇರುವುದಿಲ್ಲ ಎಂದು ಕೇಂದ್ರ ಸರಕಾರ ಘೋಷಿಸಿದೆ. ಡಿಜಿಟಲ್‌ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ತಿಂಗಳೇ ಕೇಂದ್ರ ಸಂಪುಟವು ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಅದರಂತೆ, ಡೆಬಿಟ್‌ ಕಾರ್ಡ್‌, ಭೀಮ್‌ ಆ್ಯಪ್‌ ಹಾಗೂ ಆಧಾರ್‌ ಆಧರಿತ ಪಾವತಿ ವ್ಯವಸ್ಥೆಯ ಮೂಲಕ ಖರೀದಿಸಿದರೆ, 2 ಸಾವಿರ ರೂ.ವರೆಗಿನ ಖರೀದಿಗೆ ವಹಿವಾಟು ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next