Advertisement

Sand; ಕೇಂದ್ರದಿಂದ ಸಿಗದ ಅನುಮೋದನೆ ಕೈಗೆ ಸಿಗದ ಸಿಆರ್‌ಝಡ್‌ ಮರಳು

01:44 PM Aug 30, 2024 | Team Udayavani |

ಮಂಗಳೂರು: ಮೂರು ವರ್ಷಗಳಿಂದ ಸಿಆರ್‌ಝಡ್‌ ವಲಯದ ಮರಳುಗಾರಿಕೆ ಬಗೆ ಗಿನ ಗೊಂದಲ ಬಗೆಹರಿಯದ ಕಾರಣ ಕರಾವಳಿ ಯಾದ್ಯಂತ ಅಧಿಕೃತ ಮರಳು ಪೂರೈಕೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆದರೆ ಸಿಆರ್‌ಝಡ್‌ ಪ್ರದೇಶದಲ್ಲಿ ಕಾನೂನು ಬಾಹಿರ ಮರಳು ಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ!

Advertisement

ಸಾಮಾನ್ಯವಾಗಿ ಜೂನ್‌-ಜುಲೈ ತಿಂಗಳಿನಲ್ಲಿ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆಗೆ ನಿಷೇಧ ಇರುತ್ತದೆ. ಬಳಿಕ ನದಿಗಳಲ್ಲಿ ಮರಳಿನ ಸಂಗ್ರಹದ ಅಧ್ಯಯನ ನಡೆಸಿ, ವರದಿಯೊಂದಿಗೆ ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಗುತ್ತದೆ. ಅನಂತರ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಸಿ ಅನುಮತಿ ನೀಡಲಾಗುತ್ತದೆ.

ಈ ಬಾರಿ ಸಮೀಕ್ಷೆ ನಡೆಸಿ, ವರದಿ ಸಹಿತ ರಾಜ್ಯ ಪ್ರಾಧಿಕಾರಕ್ಕೆ ಪ್ರಸ್ತಾವನೆ ಹೋಗಿ ಏಳು ತಿಂಗಳುಗಳು ಕಳೆದಿವೆ. ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಬ್ಬಗಳಿಂದ ಮರಳು ತೆಗೆಯುವ ಕುರಿತು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಂದ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಕ್ತ ನಿರ್ದೇಶನಗಳನ್ನು ಕೋರಿತ್ತು.

ಈ ಬಗ್ಗೆ ಸರಕಾರದ ಅರಣ್ಯ, ಪರಿಸರ ಇಲಾಖಾ ಕಾರ್ಯದರ್ಶಿಗಳು ಉತ್ತರಿಸಿ, ದಕ್ಷಿಣ ಕನ್ನಡ ಮತ್ತು ಉಡುಪಿಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಪ್ರಸ್ತಾವನೆಗೆ ಸಂಬಂಧಿಸಿ ಕೇಂದ್ರ ಸರ ಕಾರ ದಿಂದ ಹೊರಡಿಸುವ ಆದೇಶವನ್ನು ನಿರೀಕ್ಷಿಸುವಂತೆ ತಿಳಿಸಿತ್ತು.

ಅಕ್ರಮ ಮರಳು ಕಾರುಭಾರು ನಿರಾತಂಕ
ಸದ್ಯ ಉಭಯ ಜಿಲ್ಲೆಗಳಲ್ಲಿ ಮರಳು ಬೇಕಾದವರಿಗೆ ರಾತೋರಾತ್ರಿ ಸಿಆರ್‌ಝಡ್‌ ಪ್ರದೇಶದ ನಯವಾದ ಉತ್ತಮ ದರ್ಜೆ ಮರಳನ್ನು ಪೂರೈಸುವ ಜಾಲವೇ ಇದೆ. ಇದು ಒಂದು ಲೋಡ್‌ಗೆ 5ರಿಂದ 6,000 ರೂ.ಗೆ ಸಿಗುತ್ತದೆ. ಅಧಿಕಾರಿಗಳು ಇದನ್ನು ನಿಯಂತ್ರಿಸುವ ಗೋಜಿಗೂ ಹೋಗುತ್ತಿಲ್ಲ.

Advertisement

ಕೇಂದ್ರದಿಂದ ಮಾಹಿತಿ ಇಲ್ಲ
ಕೇಂದ್ರ ಸರಕಾರದ ಪರಿಸರ, ಸಿಆರ್‌ಝಡ್‌, ಕೈಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳು ಸಭೆ ನಡೆಸಿ ಈ ಕುರಿತ ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿದ್ದು, ಇದಕ್ಕೆ ರಾಜ್ಯ ಸರಕಾರ ಒತ್ತಡ ಹಾಕಬೇಕಾಗುತ್ತದೆ. ಆದರೆ ಹಿಂದೆಲ್ಲ ಆಗಸ್ಟ್‌ ತಿಂಗಳಿನಲ್ಲಿ ನಡೆಯುತ್ತಿದ್ದ ಸಭೆ ಈ ಬಾರಿ ನಡೆದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ನಾನ್‌ ಸಿಆರ್‌ಝಡ್‌ ಪ್ರದೇಶದಲ್ಲಿ ಸುಮಾರು 16 ಬ್ಲಾಕ್‌ ಗುರುತಿಸಲಾಗಿತ್ತಾದರೂ ಸದ್ಯ ಮಳೆ ಇರುವ ಕಾರಣ ಮರಳು ತೆಗೆಯುವುದು ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next