ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದಿಂದ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಆಚರಿಸಿಕೊಳ್ಳುವರು ಆಚರಿಸಿಕೊಳ್ಳಲಿ ಆದರೆ ಆಚರಿಸಿಕೊಳ್ಳುವವರು ಬಿಜೆಪಿಯವರಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಟಿಪ್ಪುಸುಲ್ತಾನ ಜಯಂತಿ ಆಚರಣೆಗೆ ಬಿಜೆಪಿ ಸಂಪೂರ್ಣ ವಿರೋಧ ಇದೆ. ಯಾರೇ ಟಿಪ್ಪು ಜಯಂತಿ ಆಚರಿಸಿದರೂ ಅವರು ನಮ್ಮವರಲ್ಲ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಡಿಕೆ ಶಿವಕುಮಾರ್ ಬಿಡುಗಡೆ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಭ್ರಷ್ಟರ ಜೊತೆ ಕಾಂಗ್ರೆಸ್ ಪಕ್ಷವಿದೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು . ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ಅದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ.. ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಎಂದರು.
ವೈದ್ಯಕೀಯ ಸೀಟು ಅಕ್ರಮ:ಸಿಬಿಐ ತನಿಖೆ ಇಲ್ಲ
ರಾಜ್ಯದ ವೈದ್ಯಕೀಯ ಸೀಟುಗಳ ಮಾರಾಟ ವಿಚಾರದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.
ಈಗಾಗಲೇ ಈ ಸಂಬಂಧ ಐಟಿ ಇಲಾಖೆ ತನಿಖೆ ನಡೆಸುತ್ತಿದೆ. ಅದರ ಪ್ರಾಥಮಿಕ ವರದಿ ಬರಲಿ. ಅದಕ್ಕೂ ಮೊದಲು ಬೇರೊಂದು ಸಂಸ್ಥೆಗೆ ತನಿಖೆ ವಹಿಸುವ ಅಗತ್ಯವಿಲ್ಲ ಎಂದರು.