Advertisement

ಸರಕು ಸಾಗಣೆ ವಾಹನ ತಪಾಸಣೆ ಇಲ್ಲ

06:00 AM Jul 26, 2018 | |

ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲಿ ಸರಕು ಸಾಗಣೆಯ ವಾಹನಕ್ಕೆ ಅನಗತ್ಯ ತಪಾಸಣೆ, ತನಿಖೆ ಇರಲಾರದು. ಈ ಬಗ್ಗೆ ಜಿಎಸ್‌ಟಿ ಮಂಡಳಿ ರಚಿಸಿದ್ದ ಟಾಸ್ಕ್ಫೋರ್ಸ್‌ ನೀಡಿದ್ದ ಶಿಫಾರಸುಗಳಿಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಪರ್ಮಿಟ್‌, ರಸ್ತೆ ತೆರಿಗೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬ ಪ್ರಮಾಣ ಪತ್ರ (ಫಿಟ್‌ನೆಸ್‌ ಸರ್ಟಿಫಿಕೆಟ್‌) ಸೇರಿದಂತೆ ಅನಗತ್ಯ ವ್ಯವಸ್ಥೆಗಳನ್ನು ರದ್ದು ಮಾಡಬೇಕು ಎಂದು ಮಾಡಿದ್ದ ಪ್ರಸ್ತಾಪಗಳಿಗೆ ಮಂಡಳಿ ಅಂಗೀಕಾರ ನೀಡಿದೆ. 

Advertisement

ಮೌಲ್ಯ ವರ್ಧಿತ ತೆರಿಗೆ, ಎಂಟ್ರಿ ಟ್ಯಾಕ್ಸ್‌ಗಳನ್ನು ರದ್ದು ಮಾಡಿರುವುದರಿಂದ ಪರವಾನಗಿ ವ್ಯವಸ್ಥೆ ಬೇಕಾಗಿಲ್ಲ ಎಂದು ಟಾಸ್ಕ್ಫೋರ್ಸ್‌ ಹೇಳಿತ್ತು. ಹೀಗಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರವಾನಗಿ ವ್ಯವಸ್ಥೆ ಅಗತ್ಯವಿಲ್ಲ ಎಂದು ಸಲಹೆ ಮಾಡಿತ್ತು.

ಹೀಗಿದ್ದರೂ ಸರಕು ಸಾಗಣೆಯ ವಾಹನಗಳು ಇತರ ತನಿಖೆ ಮತ್ತು ತಪಾಸಣೆಗಾಗಿ ನಿಲ್ಲುತ್ತಿದ್ದವು. ಒಂದು ವರ್ಷದ ಅವಧಿಯ ಫಿಟ್‌ನೆಸ್‌ ಸರ್ಟಿಫಿಕೆಟ್‌ ಜಾರಿ ಮಾಡಲೂ ಇದು ಸಲಹೆ ಮಾಡಿದೆ. ಏಕೀಕೃತ  ಇ-ವೇ ಬಿಲ್‌ ಪ್ರಸ್ತಾಪವನ್ನು ಟಾಸ್ಕ್ಫೋರ್ಸ್‌ ಸೂಚಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next