Advertisement

ಚೋರಾಡಿಗೆ ಮತ್ತೆ ಬಸ್ಸಿಲ್ಲ!

12:30 AM Apr 13, 2019 | Team Udayavani |

ಕುಂದಾಪುರ: ಹಾಲಾಡಿ ಸಮೀಪದ ಚೋರಾಡಿಗೆ ಮತ್ತೆ ಬಸ್ಸು ಸಂಚಾರ ನಿಂತಿದೆ. ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ಸು ಸಂಚಾರ ಆರಂಭವಾಗಿತ್ತು. ಆದರೆ ಈಗ ನಾಲ್ಕು ದಿನಗಳಿಂದ ಬಸ್ಸು ಸಂಚಾರ ಸ್ಥಗಿತವಾಗಿದ್ದು ಓಡಾಟಕ್ಕೆ ಬಸ್ಸನ್ನೇ ನಂಬಿದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ನಿತ್ಯ ಕಚೇರಿಗೆ ಬರುವವರಿಗೆ ಸಮಸ್ಯೆಯಾಗಿದೆ. ಬಸ್‌ ಓಡಿಸದಿರಲು ಚುನಾವಣೆ, ಬಸ್ಸಿಗೆ ದೃಢತೆ ಪ್ರಮಾಣಪತ್ರ ಸೇರಿದಂತೆ ವಿವಿಧ ಕಾರಣಗಳನ್ನು ನಿಗಮದ ಅಧಿಕಾರಿಗಳು ಜನರಿಗೆ ನೀಡುತ್ತಿದ್ದಾರೆ.

Advertisement

ಸ್ವಾತಂತ್ರಾéನಂತರ ಈವರೆಗೆ ಹಾಲಾಡಿ ಸಮೀಪ ಚೋರಾಡಿ ಎಂಬ ಊರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯ ಇರಲಿಲ್ಲ. ಸ್ಥಳೀಯರ ಮತ್ತು ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ ಸರಕಾರಿ ಬಸ್‌ ಸೇವೆ ಜ.10ರಿಂದ ಆರಂಭವಾಗಿತ್ತು. ಬೆಳಗ್ಗೆ 7.5ಕ್ಕೆ ಕುಂದಾಪುರದಿಂದ ಹೊರಡುವ ಬಸ್‌ 8.25ಕ್ಕೆ ಚೋರಾಡಿ ತಲುಪುತ್ತಿತ್ತು.

ಇಲ್ಲಿನ ಜನರು ಈಗಲೂ ಆರೆಂಟು ಕಿ.ಮೀ. ನಡೆಯಬೇಕು. ಇಲ್ಲವೇ ಖಾಸಗಿ ವಾಹನಗಳ ಮೊರೆ ಹೊಗಬೇಕು. ಒಟ್ಟು 9 ಕಿ.ಮೀ. ಇರುವ ಈ ರಸ್ತೆ ಹಾಲಾಡಿ – ಚೋರಾಡಿ- ವಂಡಾರು – ಮಾವಿನಕಟ್ಟೆಯನ್ನು ಸಂದಿಸುತ್ತದೆ. ಇದೀಗ ವಿವಿಧ ಕಾರಣಗಳನ್ನು ನೀಡಿ ಕೆಎಸ್‌ಆರ್‌ಟಿಸಿ ಬಸ್ಸು ಸಂಚಾರ ಸ್ಥಗಿತಗೊಳಿಸಿದೆ.

ಸಮಯ ಬದಲಿಗೆ ಮನವಿ
ಬಸ್ಸಿನ ಸಮಯ ಬದಲಾಯಿಸಲು ಸ್ಥಳೀಯರು ಮನವಿ ನೀಡಿದ್ದರು. ಕುಂದಾಪುರದಿಂದ ಬೆಳಗ್ಗೆ 7 ಗಮಟೆಗೆ ಹೊರಟು ಬಸೂÅರು, ಹುನ್ಸೆಮಕ್ಕಿ, ಹಾಲಾಡಿ, ಚೋರಾಡಿ, ವಂಡಾರು, ಮಾವಿನಕಟ್ಟೆಗೆ 7 ಗಂಟೆಗೆ ತಲುಪುವುದು, 8.05ಕ್ಕೆ ವಂಡಾರು ಮಾವಿನಕಟ್ಟೆಯಿಂದ ಹೊರಟು 9.45ಕ್ಕೆ ಕುಂದಾಪುರ ತಲುಪುವುದು, ಮತ್ತೆ 10 ಗಂಟೆಗೆ ಕುಂದಾಪುರದಿಂದ ಹೊರಟು ಮಾವಿನಕಟ್ಟೆಯಿಂದ ಮಂದಾರ್ತಿ ಬಾಕೂìರು ಮೂಲಕ ಬ್ರಹ್ಮಾವರಕ್ಕೆ 11.45ಕ್ಕೆ ತಲುಪುವುದು, ಮಧ್ಯಾಹ್ನ 12 ಗಂಟೆಗೆ ಅದೇ ರಸ್ತೆ ಮೂಲಕ ಹೊರಟು ಕುಂದಾಪುರಕ್ಕೆ 3 ಗಂಟೆಗೆ ತಲುಪುವುದು, ಕುಂದಾಪುರದಿಂದ 4 ಗಂಟೆಗೆ ಹೊರಟು 5 ಗಂಟೆಗೆ ಮಾವಿನಕಟ್ಟೆಗೆ, 5.15ಕ್ಕೆ ಮಾವಿನಕಟ್ಟೆಯಿಂದ ಹೊರಟು 7 ಗಂಟೆಗೆ ಕುಂದಾಪುರ ತಲುಪಿದರೆ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಹಾಲಾಡಿ ಪಂಚಾಯತ್‌ ವತಿಯಿಂದ ಕೂಡಾ ಮನವಿ ನೀಡಲಾಗಿತ್ತು. ಆದರೆ ಇದಕ್ಕೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಆರ್‌ಟಿಒ ಮೂಲಕ ಸಮಯ ನಿಗದಿಯಾಗಬೇಕಾದ ಕಾರಣ ಸದ್ಯ ಈ ಬೇಡಿಕೆ ಈಡೇರಿಕೆ ಕಷ್ಟ ಎಂದಿದ್ದಾರೆ.

ಬಸ್ಸು ಬಿಡಲೇಬೇಕು
ಸತತ ಹೋರಾಟದ ಫ‌ಲವಾಗಿ ಬಸ್ಸು ಸಂಚಾರ ಆರಂಭವಾಗಿದ್ದು ಕ್ಷುಲ್ಲಕ ಕಾರಣ ಹೇಳಿ ಬಸ್‌ ಸಂಚಾರ ಸ್ಥಗಿತಗೊಳಿಸುವುದು ಸರಿಯಲ್ಲ. ತತ್‌ಕ್ಷಣ ಬಸ್‌ ಓಡಾಟ ಆರಂಭಿಸಬೇಕು.
-ಅಶೋಕ್‌ ಶೆಟ್ಟಿ ಚೋರಾಡಿ, ಬಸ್‌ ಓಡಾಟಕ್ಕೆ ಹೋರಾಟ ನಡೆಸಿದವರು

Advertisement

ತತ್‌ಕ್ಷಣ ಬಿಡಲಾಗುವುದು
ಮಿನಿ ಬಸ್‌ಗಳೆಲ್ಲ ಒಟ್ಟಾಗಿ ಫಿಟ್‌ನೆಸ್‌ ಸರ್ಟಿಫಿಕೇಟ್‌ಗೆ ಹೋದ ಕಾರಣ ಒಂದೆರಡು ದಿನ ಸಮಸ್ಯೆಯಾಗಿದೆ. ತತ್‌ಕ್ಷಣ ಚೋರಾಡಿಗೆ ಬಸ್‌ ಬಿಡಲು ವ್ಯವಸ್ಥೆ ಮಾಡಲಾಗುವುದು. ಬಸ್‌ ಸಮಯ ಬದಲಾವಣೆಗೆ ಈಗಿನ ಪರ್ಮಿಟ್‌ ಅವಧಿ ಮುಗಿದ ಬಳಿಕ ಆರ್‌ಟಿಒಗೆ ಮನವಿ ಸಲ್ಲಿಸಲಾಗುವುದು. ಈಗ ಇರುವ ಪರ್ಮಿಟ್‌ನಂತೆ ಸಮಯ ಬದಲಾಯಿಸಲು ಸಾಧ್ಯವಿಲ್ಲ.
-ರಾಜೇಶ್‌ ಮೊಗವೀರ,
ಡಿಪೋ ಮೆನೇಜರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next