ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ವಿಶ್ವವಿದ್ಯಾನಿಲಯದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯ ಕಾಲೇಜುಗಳು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ಕಪ್ಪು ಉಡುಪು ಧರಿಸುವಂತಿಲ್ಲ, ಕಡ್ಡಾಯ ಹಾಜರಾತಿ ಸೇರಿದೆ. ಅಲ್ಲದೆ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ತರಗತಿಗಳನ್ನು ಅಮಾನತುಗೊಳಿಸಲಾಗಿದೆ.
ಜೂನ್ 30 ರಂದು ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹಿಂದೂ ಕಾಲೇಜು, ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜು ಮತ್ತು ಜಾಕಿರ್ ಹುಸೇನ್ ದೆಹಲಿ ಕಾಲೇಜುಗಳು ಕಾರ್ಯಕ್ರಮದ ನೇರ ಪ್ರಸಾರಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಾಜರಾಗುವುದನ್ನು ಕಡ್ಡಾಯಗೊಳಿಸಿವೆ.
ಇದನ್ನೂ ಓದಿ:ಭಾರತದ ಅರ್ಥವ್ಯವಸ್ಥೆಗೆ ‘ಮೇಕ್ ಇನ್ ಇಂಡಿಯಾ’ ದೊಡ್ಡ ಕೊಡುಗೆ ನೀಡಿದೆ: ಮೋದಿ ಮೆಚ್ಚಿದ ಪುಟಿನ್
ಬುಧವಾರ ನೀಡಿದ ನೋಟಿಸ್‌ನಲ್ಲಿ, ಹಿಂದೂ ಕಾಲೇಜು ಪ್ರಭಾರಿ ಶಿಕ್ಷಕಿ ಮೀನು ಶ್ರೀವಾಸ್ತವ ಅವರು ಲೈವ್ ಸ್ಟ್ರೀಮಿಂಗ್ ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಐದು ಹಾಜರಾತಿಗಳನ್ನು ನೀಡಲಾಗುವುದು ಎಂಬ ಏಳು ಅಂಶಗಳ ಮಾರ್ಗಸೂಚಿಗಳನ್ನು ಹಾಕಿದ್ದಾರೆ.
“ನೀವು ನಿಮ್ಮ ಐಡಿ ಕಾರ್ಡ್ ತರಬೇಕು. ಆ ದಿನ ಕಪ್ಪು ಬಟ್ಟೆಯನ್ನು ಧರಿಸಬಾರದು. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿದ್ದು, ಲೈವ್ ಸ್ಟ್ರೀಮಿಂಗ್ ಗೆ ಹಾಜರಾಗಲು ಅವರಿಗೆ ಐದು ಹಾಜರಾತಿಗಳನ್ನು ನೀಡಲಾಗುವುದು” ಎಂದು ಅವರು ಹೇಳಿದರು.