ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು ಈ ಭಾರಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೊಸ ತಂತ್ರಗಾರಿಕೆಯನ್ನು ನಡೆಸಲು ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ನಿರ್ಧರಿಸಿದ್ದಾರೆ.
ಈ ಬಾರಿಯ ಲೋಕ ಸಭೆ ಚುನಾವಣೆಗೆ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಅವರು ಯಾವುದೇ ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಹಾಕುವುದಿಲ್ಲ ಎಂದ ಅವರು ಜೊತೆಗೆ ಲೋಕಸಭಾ ಕ್ಷೇತ್ರವಾದ ನಾಗ್ಪುರದಲ್ಲಿ ಪ್ರಚಾರದ ಸಮಯದಲ್ಲಿ ಜನರಿಗೆ ಚಹಾವನ್ನು ನೀಡುವುದಿಲ್ಲ ಯಾರು ಮತ ಹಾಕುತ್ತಾರೋ ಅವರು ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಶಿಕ್ಷಕರ ಮಂಡಳಿ (ಎಂಎಸ್‌ಟಿಸಿ) ಸಮಾರಂಭದಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದ ವಾಶಿಮ್‌ನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಚಾಲನೆ ನೀಡಲಾಗುತ್ತಿದ್ದು ಇಲ್ಲಿನ ಕಾಮಗಾರಿಯಲ್ಲಿ ಯಾರಿಗೂ ಲಂಚ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಇದೆ ವೇಳೆ ಹೇಳಿಕೆ ನೀಡಿದ ಅವರು ಮುಂದಿನ ಚುನಾವಣಾ ಪ್ರಚಾರದ ವೇಳೆ ಪಕ್ಷದ ಪರವಾಗಿ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಹಾಕುವುದಿಲ್ಲ ಎಂದು ಹೇಳಿದ್ದಾರೆ ಅಷ್ಟು ಮಾತ್ರವಲ್ಲದೆ ಚುನಾವಣಾ ಪ್ರಚಾರದ ವೇಳೆ ಯಾರಿಗೂ ಚಹಾ ನೀಡಿ ಮತ ಸೆಳೆಯುವ ಪ್ರಯತ್ನವನ್ನೂ ಮಾಡುವುದಿಲ್ಲ ಯಾರಿಗೆ ಮತ ಹಾಕಲು ಮನಸ್ಸಿದೆಯೋ ಅವರು ಖಂಡಿತವಾಗಿಯೂ ನನಗೆ ಮತ ಹಾಕೇ ಹಾಕುತ್ತಾರೆ ಹಾಗಾಗಿ ಯಾವುದೇ ರೀತಿಯಲ್ಲೂ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲ್ಲ ಎಂದು ಹೇಳಿದ್ದಾರೆ.
ಮತದಾರರು ತುಂಬಾ ಬುದ್ಧಿವಂತರು ಮತ್ತು ಯಾವ ಅಭ್ಯರ್ಥಿ ಬೇಕೋ ಆ ಅಭ್ಯರ್ಥಿಗೆ ಮತ ಹಾಕುವ ಹಕ್ಕನ್ನು ಪಡೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Cauvery issue; ರೈತರ ಹಿತಕ್ಕೆ ಅಡ್ಡಿಯಾಗದಂತೆ ವಿವಾದ ಬಗೆಹರಿಸುತ್ತೇವೆ: ಸಿಎಂ ಸಿದ್ದರಾಮಯ್ಯ