Advertisement

ಪತ್ರಕರ್ತರ ಜತೆ ಜಗಳ: ಕಂಗನಾಗೆ ನಿಷೇಧ

01:15 AM Jul 11, 2019 | Team Udayavani |

ಮುಂಬಯಿ: ತನ್ನ ವಿರುದ್ಧ ದುರುದ್ದೇಶ ಪೂರಿತ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ “ಜಡ್ಜ್ ಮೆಂಟಲ್‌ ಹೈ ಕ್ಯಾ’ ಸಿನೆಮಾದ ಪತ್ರಿಕಾಗೋಷ್ಠಿಯಲ್ಲಿ ಜಗಳ ಮಾಡಿದ್ದಕ್ಕೆ ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಸಿನಿಮಾ ಪತ್ರಕರ್ತರ ಸಂಘಟನೆ ನಿಷೇಧ ಹೇರಿದೆ. ಅವರ ಸುದ್ದಿಯನ್ನು ಪ್ರಕಟಿಸದೇ ಇರಲು ನಿರ್ಧರಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಭವಿಸಿದ ಘಟನೆಗೆ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲಂಸ್‌ ಕ್ಷಮೆ ಕೋರಿದೆಯಾದರೂ, ನಿಷೇಧ ಹಿಂಪಡೆಯಲು ಸಿನಿಮಾ ಪತ್ರಕರ್ತರ ಸಂಘಟನೆ ಸಮ್ಮತಿಸಿಲ್ಲ. ಈ ನಿಷೇಧ ಕೇವಲ ನಟಿಗೆ ಮಾತ್ರ ಅನ್ವಯಿಸುತ್ತದೆ. ಸಿನಿಮಾ ಅಥವಾ ಸಿನಿಮಾ ನಿರ್ಮಾಣ ಸಂಸ್ಥೆಯ ಕುರಿತು ವರದಿ ಮಾಡುವ ವಿಚಾರದಲ್ಲಿ ಯಾವುದೇ ನಿಷೇಧವಿಲ್ಲ ಎಂದೂ ಸಂಘಟನೆ ತಿಳಿಸಿದೆ. ಇದೇ ವೇಳೆ, ಕಂಗನಾ ಕ್ಷಮೆ ಕೇಳುವುದಿಲ್ಲ ಎಂದು ಸೋದರಿ ರಂಗೋಲಿ ಚಾಂಡೆಲ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next