Advertisement

ವೀಸಾ ಪ್ರಕರಣ: ಕಾರ್ತಿ ಚಿದಂಬರಂಗೆ ಜಾಮೀನು ನಿರಾಕರಣೆ

10:22 PM Jun 03, 2022 | Team Udayavani |

ನವದೆಹಲಿ: ವೀಸಾ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ಸಿಬಿಐ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

Advertisement

ಹಾಗೆಯೇ ಅವರಿಗೆ ನೀಡಲಾಗಿರುವ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸುವ ಮನವಿಯನ್ನೂ ನ್ಯಾಯಾಲಯ ತಳ್ಳಿ ಹಾಕಿದೆ.

ಕಾರ್ತಿ ಅವರೊಂದಿಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಇಬ್ಬರು ಇತರ ಆರೋಪಿಗಳ ಅರ್ಜಿಯನ್ನೂ ತಿರಸ್ಕರಿಸಲಾಗಿದೆ.

263 ಚೀನಾ ನಾಗರಿಕರಿಗೆ ವೀಸಾ ಮಾಡಿಕೊಡಲು ಪಂಜಾಬ್‌ನ ಸಂಸ್ಥೆಯೊಂದರಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕಾರ್ತಿ ಚಿದಂಬರಂ ಅವರ ವಿರುದ್ಧವಿದೆ.

Advertisement

Udayavani is now on Telegram. Click here to join our channel and stay updated with the latest news.

Next