Advertisement

ವಿವಿಗಳಲ್ಲಿ ದೇಶ ವಿರೋಧಿ ಕೃತ್ಯಗಳಿಗಿಲ್ಲ ಅವಕಾಶ: ಉ.ಪ್ರ. ಸುಗ್ರೀವಾಜ್ಞೆ

12:36 AM Jun 20, 2019 | mahesh |

ಲಕ್ನೋ: ಖಾಸಗಿ ವಿವಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಲು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

Advertisement

ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಲ್ಲ ವಿವಿಗಳು ಕೂಡ ಲಿಖೀತ ರೂಪದಲ್ಲಿ ಬರೆದುಕೊಡಬೇಕು. ದೇಶ ವಿರೋಧಿ ಕೃತ್ಯಗಳು ಕಂಡುಬಂದಲ್ಲಿ, ಅಂಥ ವಿವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಂಶವೂ ಸುಗ್ರೀವಾಜ್ಞೆಯಲ್ಲಿದೆ. ಆದರೆ, ಯಾವೆಲ್ಲಾ ಚಟುವಟಿಕೆಗಳನ್ನು ದೇಶ ವಿರೋಧಿ ಚಟುವಟಿಕೆಗಳು ಎಂದು ಪರಿಗಣಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿಲ್ಲ. ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.50 ರಿಯಾಯಿತಿ, ಶೇ.75ರಷ್ಟು ಬೋಧಕ ಸಿಬ್ಬಂದಿಯನ್ನು ಕಾಯಂ ನೌಕರರೆಂದು ಘೋಷಿಸುವುದು ಕೂಡ ಇದರಲ್ಲಿ ಸೇರಿದೆ. ಜತೆಗೆ, ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೇ ವಿವಿಗಳು ಯಾರಿಗೂ ಗೌರವ ಪದವಿಗಳನ್ನು ನೀಡುವಂತಿಲ್ಲ ಎಂದೂ ತಿಳಿಸಲಾಗಿದೆ.

ಕರಡು ಸುಗ್ರೀವಾಜ್ಞೆಗೆ ರಾಜ್ಯ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದ್ದು, ಜು.18ರಿಂದ ಆರಂಭವಾಗುವ ಅಸೆಂಬ್ಲಿ ಅಧಿವೇಶನದಲ್ಲಿ ಇದನ್ನು ಮಂಡಿಸಲು ನಿರ್ಧರಿಸಲಾಗಿದೆ. ಸುಗ್ರೀವಾಜ್ಞೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದರ ಹಿಂದೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಆರೆಸ್ಸೆಸ್‌ ಸಿದ್ಧಾಂತ ಹರಡುವ ದುರುದ್ದೇಶವಿದೆ ಎಂದು ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next