ನವದೆಹಲಿ: ಸರ್ಕಾರವು ಹಜ್ ಸಬ್ಸಿಡಿಯನ್ನು ಹಿಂಪಡೆದಿದ್ದರೂ ಹಜ್ ಯಾತ್ರಿಕರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುತ್ತಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಸೋಮವಾರ ಹಜ್ ಯಾತ್ರಿಕರ ಮೊದಲ ತಂಡವು ಮೆಕ್ಕಾಗೆ ಪ್ರಯಾಣ ಬೆಳೆಸಲಿದ್ದು, ಯಾತ್ರಾರ್ಥಿಗಳ ಜೊತೆಗೆ ಭಾನುವಾರ ನಖ್ವಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಮೋದಿ ಸರ್ಕಾರವು ಮಾಡಿರುವಂಥ ಸುಧಾರಣಾ ಕ್ರಮಗಳಿಂದಾಗಿ ಹಜ್ ಯಾತ್ರೆಯ ಪ್ರಕ್ರಿಯೆಯು ಈಗ ಪಾರದರ್ಶಕವಾಗಿದೆ. ಪ್ರಕ್ರಿಯೆಯು ಶೇ.100ರಷ್ಟು ಡಿಜಿಟಲ್ ಆಗಿದೆ, ಡಿಜಿಟಲ್ ಹೆಲ್ತ್ ಕಾರ್ಡ್, ಇ-ಮಸೀಹಾ ಆರೋಗ್ಯ ಸೌಲಭ್ಯಗಳು, ಇ-ಲಗೇಜ್ ಪ್ರೀ-ಟ್ಯಾಗಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಲವು ದಶಕಗಳಿಂದಲೂ ಸಬ್ಸಿಡಿ ಹೆಸರಿನಲ್ಲಿ ಯಾತ್ರಿಗಳಿಗೆ ವಂಚಿಸಲಾಗುತ್ತಿತ್ತು.
ಈಗ ಸಬ್ಸಿಡಿ ತೆಗೆದುಹಾಕಿದ್ದರೂ ಯಾತ್ರಿಗಳಿಗೆ ಯಾವುದೇ ರೀತಿ ಹೊರೆ ಬೀಳುತ್ತಿಲ್ಲ’ ಎಂದಿದ್ದಾರೆ.
ಹಜ್ ಯಾತ್ರಿಗಳನ್ನು ಹೊತ್ತ ಮೊದಲ ವಿಮಾನವು ಸೋಮವಾರ ಮುಂಜಾನೆ ದೆಹಲಿಯಿಂದ ಹೊರಡಲಿದೆ.