Advertisement

ಆಧಾರ್‌ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಣೆ ? ಮಹಿಳೆಯ ಸಾವು

11:00 AM Dec 30, 2017 | udayavani editorial |

ಹೊಸದಿಲ್ಲಿ : ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲ್ಪಟ್ಟರೆನ್ನಲಾದ  ಕಾರ್ಗಿಲ್‌ ಯೋಧನ  ಪತ್ನಿ  ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಅಮಾನುಷ ಘಟನೆ ಹರಿಯಾಣದ ಸೋನಿಪತ್‌ ನಲ್ಲಿ ನಡೆದಿದೆ.

Advertisement

“ತೀವ್ರ ಅನಾರೋಗ್ಯ ಪೀಡಿತರಾಗಿದ್ದ  ನನ್ನ ತಾಯಿಗೆ ಚಿಕಿತ್ಸೆ ದೊರಕಿಸಲು ನಾನು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಒಯ್ದಿದ್ದೆ; ಅಲ್ಲಿ ನಮ್ಮ ಒರಿಜಿನಲ್‌ ಆಧಾರ್‌ ಕಾರ್ಡ್‌ ಕೇಳಿದರು. ನನ್ನ ಬಳಿ ಒರಿಜಿನಲ್‌ ಕಾರ್ಡ್‌ ಇರಲಿಲ್ಲ; ಆದರೆ ಅದರ ಇಮೇಜ್‌ ನನ್ನ  ಸ್ಮಾರ್ಟ್‌ ಫೋನಿನಲ್ಲಿ ಇತ್ತು; ಅದನ್ನು ತೋರಿಸಿದೆ; ಅದನ್ನು ಅವರು ಮಾನ್ಯ ಮಾಡಲಿಲ್ಲ; ಇನ್ನೊಂದು ಅರ್ಧ ತಾಸಿನೊಳಗೆ ನಾನು ಒರಿಜಿನಲ್‌ ಆಧಾರ್‌ ಕಾರ್ಡ್‌ ತಂದು ಕೊಡ್ತೇನೆ, ನೀವು ಚಿಕಿತ್ಸೆ ಆರಂಭಿಸಿ ಎಂದು ನಾನು ಗೋಗರೆದೆ; ಆದರೆ ಅವರು ಅದಕ್ಕೆ ನಿರಾಕರಿಸಿದ. ಸರಿಯಾದ ಹೊತ್ತಿನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ನನ್ನ ತಾಯಿ ತೀರಿಕೊಂಡರು’ ಎಂದು ಮೃತ ಮಹಿಳೆಯ ಹಾಗೂ ಕಾರ್ಗಿಲ್‌ ಯೋಧನ ಮಗ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆದರೆ ಆಸ್ಪತ್ರೆ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಆಧಾರ್‌ ಕಾರ್ಡ್‌ ಬೇಕಿರುವುದು ದಾಖಲೀಕರಣ ಪ್ರಕ್ರಿಯೆಗೆ ವಿನಾ ಚಿಕಿತ್ಸೆಗಲ್ಲ ಎಂದವರು ಹೇಳಿದ್ದಾರೆ. 

“ನಾವೆಂದೂ ಚಿಕಿತ್ಸೆಯನ್ನು ನಿರಾಕರಿಸಿಲ್ಲ; ದಯವಿಟ್ಟು ನಿಮಗಿದು ತಿಳಿದಿರಲಿ – ರೋಗಿಯನ್ನು ಅವರು ಆಸ್ಪತ್ರೆಗೆ ತರಲೇ ಇಲ್ಲ. ನಾವೆಂದೂ ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ  ನಾವು ಈ ತನಕ ಯಾರಿಗೂ ಚಿಕಿತ್ಸೆ ನಿರಾಕರಿಸಿಲ್ಲ” ಎಂದು ಆಸ್ಪತ್ರೆಯಲ್ಲಿನ ವೈದ್ಯರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next