Advertisement

TB patients: ಕ್ಷಯ ರೋಗಿಗಳಿಗಿಲ್ಲ ಮಾಸಿಕ 500 ಸಹಾಯಧನ

04:43 PM Feb 15, 2024 | Team Udayavani |

ದೇವನಹಳ್ಳಿ: ಕಳೆದ ಆರು ತಿಂಗಳಿನಿಂದ ಕ್ಷಯ ರೋಗಿಗಳಿಗೆ ಮಾಸಿಕ 500ರೂ.ಗಳ ಸಹಾಯಧನ ಬರದೆ ಇರುವುದು. ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ.ಆದರೆ, ಆದಷ್ಟು ಬೇಗ ಕ್ಷಯ ರೋಗದಿಂದ ಗುಣಮುಖರಾಗಲು ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಬಡ ರೋಗಿ ಗಳ ಅನುಕೂಲಕ್ಕೆ ಕೇಂದ್ರ ಸರ್ಕಾರ ಮಾಸಿಕ 500 ರೂ. ನೀಡಲು ಮುಂದಾಗಿತ್ತು. ಆರು ತಿಂಗಳಿನಿಂದ ಇವರ ಖಾತೆಗೆ ಸಹಾಯಧನ ಸಂದಾಯವಾಗಿಲ್ಲ.

Advertisement

ಆಹಾರ ಸಾಮಗ್ರಿಗಳ ಕಿಟ್‌ ವಿತರಣೆ: ಕೇಂದ್ರ ಸರ್ಕಾರ 2025ರ ವೇಳೆಗೆ ದೇಶದಲ್ಲಿ ಕ್ಷಯರೋಗ ವನ್ನು ಸಂಪೂರ್ಣ ವಾಗಿ ಮುಕ್ತ ಮಾಡುವ ಗುರಿಯನ್ನು ಹೊಂದಿದ್ದು. ಅದರ ಅನುಸಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಪ್ರಮುಖವಾಗಿ ನಿಕ್ಷಯ್‌ 2.0 ಎಂಬ ತಂತ್ರಾಂಶ ರೂಪಿಸುವ ಮೂಲಕ ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಸಹಾಯ ಹಸ್ತ ಚಾಚುವ ದಾನಿಗಳ ನೋಂದಣಿಗೆ ಅವಕಾಶ ಕಲ್ಪಿಸಿತ್ತು. ಈ ತಂತ್ರಾಂಶದಲ್ಲಿ ಜಿಲ್ಲೆಯ ಸರ್ಕಾರಿ ನೌಕರರು, ಉದ್ಯಮಿಗಳು, ರಾಜಕೀಯ ಮುಖಂಡರು ಗಳು ಸೇರಿದಂತೆ 112 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ಮಂದಿ ರೋಗಿಗಳನ್ನು ದತ್ತು ಪಡೆದು ಅವರಿಗೆ ಆರ್ಥಿಕ ಸಹಾಯ, ಆಹಾರ ಸಾಮಗ್ರಿಗಳ ಕಿಟ್‌ ವಿತರಣೆ ಒಳ ಗೊಂಡಂತೆ ಸಾಕಷ್ಟು ನೆರವು ನೀಡಲಾಗುತ್ತಿದೆ. ಈ ಹಿಂದೆ ಕೂಡ ಜಿಲ್ಲೆಯಲ್ಲಿ ಕ್ಷಯ ರೋಗಿಗಳನ್ನು ದತ್ತು ಪಡೆದ ದಾನಿಗಳನ್ನು ಸನ್ಮಾನಿಸಲಾಗಿತ್ತು.

ಒಟ್ಟು 776 ಕ್ಷಯ ರೋಗಿಗಳು ಪತ್ತೆ: ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆಗಾಗಿ ಸಾಕಷ್ಟು ಪ್ರಯತ್ನ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಆದರೂ ಕೂಡ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಕ್ಷಯ ರೋಗಿಗಳ ಪತ್ತೆ ಆಂದೋಲನ ನಡೆಸಿದಾಗ ಹಾಗೂ ಸಾಕಷ್ಟು ಆಸ್ಪತ್ರೆಗಳಲ್ಲಿ ಕ್ಷಯ ರೋಗಿಗಳು ಕಂಡುಬರುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಆಂದೋಲನದಲ್ಲಿ ಒಟ್ಟು 776 ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಅದರಲ್ಲೂ ವಲಸಿಗರನ್ನು ಕೂಡ ಕ್ಷಯ ರೋಗ ಪತ್ತೆಯಾಗಿದೆ.

ಸೂಕ್ತ ಚಿಕಿತ್ಸೆಯ ಜೊತೆಗೆ ಆಹಾರ ಸೇವನೆ ಮುಖ್ಯ: ಸರ್ಕಾರ ಕ್ಷಯ ರೋಗಿಗಳಿಗೆ ಎಲ್ಲ ರೀತಿಯ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ. ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿ ಸಲು ಸೂಕ್ತ ಚಿಕಿತ್ಸೆಯ ಜೊತೆಗೆ ಪೂರಕವಾದ ಪೌಷ್ಟಿಕಾಂಶ ಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗಿದೆ. ಇದರ ಹಿನ್ನೆಲೆಯಲ್ಲಿ ಅವಳಿಗೆ ತಿಂಗಳಿಗೆ 500 ಸಹಾಯಧನ ನೀಡಲಾಗುತ್ತಿದೆ.

ಆದರೆ ಇದೀಗ 6 ತಿಂಗಳಿನಿಂದ ರಾಜ್ಯಮಟ್ಟದಲ್ಲಿ ಉಂಟಾದ ಖಜಾನೆ 2 ತಾಂತ್ರಿಕ ಸಮಸ್ಯೆಯಿಂದ ರೋಗಿಗಳಿಗೆ ಹಣ ಪಾವತಿಯಾಗದೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ಆರು ತಿಂಗಳು, ಎಂಟು ತಿಂಗಳು ಹಾಗೂ ಎರಡು ವರ್ಷದವರೆಗೆ ಅಥವಾ ರೋಗದ ತೀವ್ರತೆ ಮೇಲೆ ರೋಗಿಗಳಿಗೆ ಈ ಸಹಾಯಧನ ನೀಡಲಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ಬಗೆ ಹರಿಸಬೇಕು. ಎಲ್ಲಾ ಕ್ಷಯ ರೋಗಿಗಳ ಖಾತೆಗೆ ಆದಷ್ಟು ಬೇಗ ಹಣ ಪಾವತಿಯಾದರೆ ಹೆಚ್ಚು ಅನು ಕೂಲವಾಗುತ್ತದೆ. ಇದರ ಬಗ್ಗೆ ಹಲವು ಕ್ಷಯ ರೋಗಿಗಳು ಮನವಿ ಮಾಡುತ್ತಿದ್ದಾರೆ. ಇನ್ನು ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಸಹಾಯಧನ ಬಾರದೆ ಬಡ ಕ್ಷಯ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲಾ ಕ್ಷಯ ರೋಗಿಗಳ ಮಾಹಿತಿ ಯನ್ನು ತಂತ್ರಾಂಶದಲ್ಲಿ ಅಪ್ರೋಡ್‌ ಮಾಡಲಾಗಿದೆ. ಬಾಕಿ ಇರುವ ತಿಂಗಳುಗಳ ಸಹಾ ಯಧನ ಸೇರಿದಂತೆ ಎಲ್ಲವನ್ನು ಸದ್ಯದಲ್ಲಿ ರೋಗಿಗಳ ಖಾತೆಗೆ ಜಮಾ ಮಾಡಲಾಗು ವುದು. ಈ ಹಿಂದೆ ಕ್ಷಯ ರೋಗಿಗಳ ಸಹಾಯಧನವನ್ನು ಜಿಲ್ಲೆಯಿಂದಲೇ ವಿತರಿಸಲಾಗುತ್ತಿತ್ತು. ಇದೀಗ ರಾಜ್ಯ ಮಟ್ಟದಲ್ಲಿ ಅವರ ಖಾತೆಗೆ ಹಣ ಸೇರಲಿದೆ. -ಡಾ.ನಾಗೇಶ್‌, ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next