Advertisement

ನಂ. 11: ಡೇನಿಯಲ್‌ ವೆಟರಿ ಏಕದಿನ ಜೆರ್ಸಿಗೆ ವಿದಾಯ

01:39 AM Aug 06, 2019 | Team Udayavani |

ವೆಲ್ಲಿಂಗ್ಟನ್‌: ಮಾಜಿ ನಾಯಕ ಮತ್ತು ಸ್ಪಿನ್‌ ಲೆಜೆಂಡ್‌ ಡೇನಿಯಲ್‌ ವೆಟರಿ ಅವರ ಸಾಧನೆಯ ಗೌರವಾರ್ಥ ಅವರು ಧರಿಸುತ್ತಿದ್ದ ನಂ. 11 ಜೆರ್ಸಿಗೆ ವಿದಾಯ ಹೇಳಲು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ನಿರ್ಧರಿಸಿದೆ.

Advertisement

ವೆಟರಿ ಮಾತ್ರವಲ್ಲ, 200ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡನ್ನು ಪ್ರತಿನಿಧಿಸಿದ ಎಲ್ಲ ಕ್ರಿಕೆಟಿಗರ ಜೆರ್ಸಿಗಳಿಗೆ ವಿದಾಯ ಹೇಳಲು ನ್ಯೂಜಿಲ್ಯಾಂಡ್‌ ತೀರ್ಮಾನಿಸಿದೆ. ನಂ. 11 ಜೆರ್ಸಿ ಧರಿಸುತ್ತಿದ್ದ ಡೇನಿಯಲ್‌ ವೆಟರಿ ನ್ಯೂಜಿಲ್ಯಾಂಡ್‌ ಪರ ಅತೀ ಹೆಚ್ಚು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಎಂದು ಮಂಡಳಿ ಟ್ವೀಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next