Advertisement
ಇಲ್ಲಿ ಪ್ರತಿ ವರ್ಷವೂ ವಿಶಿಷ್ಟ ಎನಿಸಿದ ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತದೆ. 10 ದಿನಗಳ ಉತ್ಸವದಲ್ಲಿ ಅತ್ಯುತ್ತಮ ಥೀಮ್, ಅತ್ಯುತ್ತಮ ಪ್ರತಿಮೆಗಳು ಹಾಗೂ ಅತ್ಯುತ್ತಮ ಅಲಂಕಾರ ವಿಭಾಗದಲ್ಲಿ ದುರ್ಗಾ ಪೂಜಾ ಸಮಿತಿಗಳಿಗೆ ಪ್ರಶಸ್ತಿಯನ್ನೂ ನೀಡಲಾಗು ತ್ತದೆ. ಈ ಬಾರಿ ಸೆಂಟ್ರಲ್ ಕೋಲ್ಕತಾದ ದಿ ಯಂಗ್ ಬಾಯ್ಸ ಕ್ಲಬ್ ಸಬೋìಜನಿನ್ ದುರ್ಗಾ ಕಮಿಟಿಯು, ಕಳೆದ ಫೆಬ್ರವರಿ ಯಲ್ಲಿ ಪಾಕ್‌ನ ಬಾಲಕೋಟ್‌ನಲ್ಲಿನ ಜೈಶ್ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನೇ ಪೆಂಡಾಲ್‌ನ ಥೀಮ್ ಆಗಿ ರೂಪಿಸಿ ಕೊಂಡಿದೆ. ಇದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಆಳೆತ್ತರದ ಮಾದರಿಯನ್ನೂ ನಿಲ್ಲಿಸಲಾಗಿದ್ದು, ಇದನ್ನು ನೋಡಲು ಜನರು ಮುತ್ತಿಗೆ ಹಾಕುತ್ತಿದ್ದಾರೆ.
ಮತ್ತೂಂದು ಸಮಿತಿಯು, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಂಥ ಥೀಮ್‌ಗಳನ್ನಿಟ್ಟು ಕೊಂಡಿ ದ್ದರೆ, ಮತ್ತೆ ಕೆಲವು ಮೊಬೈಲ್ ಟವರ್‌ಗಳ ವಿಕಿರಣಗಳು ಪಕ್ಷಿಸಂಕುಲಕ್ಕೆ ಹೇಗೆ ಹಾನಿ ಮಾಡುತ್ತಿವೆ ಎಂಬ ಥೀಮ್ ಇಟ್ಟುಕೊಂಡು ದುರ್ಗೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗೆ, ಒಂದಕ್ಕೊಂದು ವಿಭಿನ್ನ ಹಾಗೂ ವಿಶಿಷ್ಟವಾದ ಪೆಂಡಾಲ್‌ಗಳು ಬಂಗಾಲದ್ಯಾಂತ ತಲೆಎತ್ತಿರು ವುದು ಹಬ್ಬದ ಸಂಭ್ರಮವನ್ನು ಇಮ್ಮಡಿ ಗೊಳಿಸಿದೆ. ದುರ್ಗೆಯಾದ 4 ವರ್ಷದ ಫಾತಿಮಾ
ದುರ್ಗಾ ಪೂಜೆಯ ಮತ್ತೂಂದು ವಿಶೇಷವೆಂದರೆ, ನವರಾತ್ರಿಯ ಅವಧಿಯಲ್ಲಿ ನಡೆಯುವ “ಕುಮಾರಿ ಪೂಜೆ’. ಇಲ್ಲಿ ಪುಟ್ಟ ಹೆಣ್ಣು ಮಕ್ಕಳಿಗೆ ದುರ್ಗೆಯಂತೆ ವಸ್ತ್ರ ಧರಿಸಿ, ಆ ಮಕ್ಕಳನ್ನೇ ದುರ್ಗೆ ಎಂದು ಪೂಜಿಸಲಾಗುತ್ತದೆ. ಸುಮಾರು 120 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಅವರು ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಬೆಸ್ತರೊಬ್ಬರ ಪುತ್ರಿಯನ್ನು ಕರೆಸಿಕೊಂಡು ಇದೇ ರೀತಿ ಪೂಜೆ ಸಲ್ಲಿಸಿದ್ದರಂತೆ. ಈಗ ಕೋಲ್ಕತ್ತಾದ ತಮಲ್ ದತ್ತಾ ಎಂಬವರ ಕುಟುಂಬವೂ ವಿವೇಕಾನಂದರನ್ನು ಅನುಸರಿಸಿದೆ. ಅದರಂತೆ, ಉತ್ತರಪ್ರದೇಶದ ಫತೇಪುರ ಸಿಕ್ರಿಯಿಂದ 4 ವರ್ಷದ ಫಾತಿಮಾಳನ್ನು ಕೋಲ್ಕತಾಗೆ ಕರೆಸಿಕೊಂಡು, ಆಕೆಗೆ ದುರ್ಗೆಯಂತೆ ವೇಷಭೂಷಣ ತೊಡಿಸಿ ಪೂಜೆ ಸಲ್ಲಿಸಿದೆ.