Advertisement

NMC: ಜನರಿಕ್‌ ಆದೇಶಕ್ಕೆ ಎನ್‌ಎಂಸಿ ತಡೆ

10:54 PM Aug 24, 2023 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಆದೇಶವೊಂದನ್ನು ತಡೆಹಿಡಿದಿದೆ. ಆ.2ರಂದು 2023ರ ನೋಂದಾಯಿತ ವೈದ್ಯರ ನಿಯಮಾವಳಿಗಳನ್ನು ಅದು ಹೊರಡಿಸಿತ್ತು. ಈ ವೇಳೆ ನೋಂದಾಯಿತ ವೈದ್ಯರು ಜನರಿಕ್‌ ಔಷಧಿಗಳನ್ನು ಬರೆಯಬೇಕು, ಔಷಧ ಕಂಪನಿಗಳಿಂದ ಯಾವುದೇ ಕಾಣಿಕೆಗಳನ್ನು ಪಡೆಯುವಂತಿಲ್ಲ. ಒಂದು ವೇಳೆ ಈ ನಿಯಮಗಳಿಗೆ ತಪ್ಪಿದರೆ ಅವರ ಪರವಾನಗಿಗಳನ್ನೇ ರದ್ದು ಮಾಡಲಾಗುವುದು ಎಂದು ತಿಳಿಸಿತ್ತು.

Advertisement

ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯರನ್ನು ಭೇಟಿಯಾಗಿದ್ದ ಐಎಂಎ (ಭಾರತೀಯ ವೈದ್ಯಕೀಯ ಸಂಸ್ಥೆ), ಐಪಿಎಗಳು (ಭಾರತೀಯ ಔಷಧೀಯ ಮೈತ್ರಿ), ಮೇಲಿನ ನಿಯಮಾವಳಿಗಳ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿದ್ದವು. ಜನೆರಿಕ್‌ ಔಷದಿಗಳ ಗುಣಮಟ್ಟವೇ ಇನ್ನೂ ಖಾತ್ರಿಯಾಗದಿರುವಾಗ, ಅವನ್ನು ಹೇಗೆ ಸೂಚಿಸುವುದು ಎಂದು ಪ್ರಶ್ನಿಸಿದ್ದವು. ವೈದ್ಯರು ಔಷಧ ಕಂಪನಿಗಳ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿರುವ ಈ ಸಂಸ್ಥೆಗಳು, ಆದೇಶದಿಂದ ಐಎಂಎ, ಐಪಿಎಗಳನ್ನು ಹೊರಗಿಡಬೇಕೆಂದು ಕೇಳಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿರುವ ಎನ್‌ಎಂಸಿ, ಮುಂದಿನ ಆದೇಶ ಬರುವವರೆಗೆ ಹಿಂದಿನ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next