Advertisement
ಕೇರಳ: ದಿಲ್ಲಿ ಸಮಾವೇಶಕ್ಕೆ ಕೇರಳದಲ್ಲಿರುವ ತಬ್ಲೀ ಸಂಘಟನೆಯ 310 ಕಾರ್ಯಕರ್ತರು ತೆರಳಿದ್ದರು. ಇವರಲ್ಲಿ 160 ಕಾರ್ಯಕರ್ತರು ಕೇರಳಕ್ಕೆ ಹಿಂದಿರುಗಿದ್ದಾರೆ. ಇವರು ಮಲಪ್ಪುರಂ ಹಾಗೂ ಕಣ್ಣೂರು ಜಿಲ್ಲೆಗೆ ಸೇರಿದವರು. ಹಿಂದಿರುಗಿದ ಮೇಲೆ ಅವರೆಲ್ಲರೂ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಇನ್ನುಳಿದ, 150 ಕಾರ್ಯಕರ್ತರ ತಂಡ ದಿಲ್ಲಿಯಲ್ಲೇ ಉಳಿದಿದೆ.
Related Articles
Advertisement
ತೆಲಂಗಾಣ: ರಾಜ್ಯದ 29 ಜಿಲ್ಲೆಗಳಿಂದ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದ ಸುಮಾರು 1,000 ಮಂದಿಯಲ್ಲಿ ಹಲವರನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಅವರನ್ನು ಆದಿಲಾಬಾದ್, ಕುಮ್ರಮ್ ಭೀಮ್, ಆಸಿಫಾಬಾದ್, ಮಂಕೇರಿ ಯಲ್ ಹಾಗೂ ನಿರ್ಮಲಾ ಜಿಲ್ಲೆಗಳವರು ಎಂದು ಗುರುತು ಮಾಡಲಾಗಿದ್ದು, ಅವರೆಲ್ಲರನ್ನೂ ಆಯಾ ಜಿಲ್ಲೆಗಳಲ್ಲಿರುವ ಐಸೋಲೇಷನ್ ಕೇಂದ್ರಗಳಿಗೆ ರವಾನಿಸಲಾಗಿದೆ.
ಆಂಧ್ರಪ್ರದೇಶ: ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದ ಆಂಧ್ರಪ್ರದೇಶದ 500 ಜನರ ಬಗ್ಗೆ ಅಲ್ಲಿನ ಸರಕಾರ ಮಾಹಿತಿ ಕಲೆಹಾಕಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದೆ.
ಪುದುಚೇರಿ: ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದ ಪುದುಚ್ಚೇರಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರನ್ನು ಪುದುಚ್ಚೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆಯ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಭಾರತದಲ್ಲೂ ತಬ್ಲೀ ಕಂಪನನಿಜಾಮುದ್ದೀನ್ ಸಮಾವೇಶಕ್ಕೆ ಹಾಜರಾಗಿದ್ದ 24 ದಿಲ್ಲಿ ನಾಗರಿಕರಲ್ಲಿ ಸೋಂಕು ದೃಢಪಟ್ಟಿದೆ. ಈ ನಡುವೆ, ದಿಲ್ಲಿಯ ನಿಜಾಮುದ್ದೀನ್‌ನಲ್ಲಿರುವ ಇಸ್ಲಾಂ ಧರ್ಮ ಜಾಗೃತಿ ಸಂಘಟನೆಯಾದ ತಬ್ಲೀ -ಎ-ಜಮಾತ್‌ನ ಕೇಂದ್ರ ಕಚೇರಿಯಾದ ‘ಮರ್ಕಜ್’ನಲ್ಲಿ ಉಳಿದುಕೊಂಡಿದ್ದ 2,361 ಜನರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಇವರಲ್ಲಿ 617 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋನಿಂದ ನಿಜಾಮುದ್ದೀನ್ ಸಮಾ ವೇಶಕ್ಕೆ ತೆರಳಿ, ಆಅನಂತರ ಮನೆಗೆ ಹಿಂದಿರುಗದ 18 ಜನರ ಪತ್ತೆ ಬಲೆ ಬೀಸಲಾಗಿದೆ. ಈ ನಡುವೆ, ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿ ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದ 7 ಇಂಡೋನೇಷ್ಯಾ ಪ್ರಜೆಗಳನ್ನು ಪ್ರಯಾಗ್‌ರಾಜ್‌ನ ಅಬ್ದುಲ್ಲಾ ಮಸೀದಿಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಅಸ್ಸಾಂನಿಂದ ನಿಜಾಮುದ್ದೀನ್ ಸಮಾವೇಶಕ್ಕೆ ಹೋಗಿದ್ದವರಲ್ಲಿ ಒಬ್ಬರು ಕೋವಿಡ್ 19 ವೈರಸ್ ಸೋಂಕಿನಿಂದ ಬುಧವಾರ ನಿಧನರಾಗಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಿ ಹಿಂದಿರುಗಿದ್ದ ಜಮ್ಮುವಿನ 10 ಜನರನ್ನು ಪ್ರತ್ಯೇಗ ನಿಗಾದಲ್ಲಿ ಇರಿಸಲಾಗಿದೆ. ಅಲ್ಲಿಂದ ಹಿಂದಿರುಗಿದವರು ಇರುವ ಕಾಶ್ಮೀರದ 8 ಹಳ್ಳಿಗಳನ್ನು ಗುರುತು ಹಾಕಿ ಅವುಗಳನ್ನು ಕೆಂಪು ವಲಯಗಳೆಂದು ಹೆಸರಿಸಲಾಗಿದೆ. ಸಮಾವೇಶಕ್ಕೆ ಹೋಗಿ ಬಂದಿರುವ ಬಿಹಾರದ 81 ಮಂದಿಯ ಪಟ್ಟಿಯ ಅಲ್ಲಿ ರಾಜ್ಯ ಸರಕಾರಕ್ಕೆ ಲಭ್ಯವಾಗಿದೆ. ರಾಜಸ್ಥಾನದ 1,500ಕ್ಕೂ ಹೆಚ್ಚು ಜನರಲ್ಲಿ 24 ಜನರಿಗೆ ಕೊರೊನಾ ಸೋಂಕು ಹರಡಿರುವುದು ಪತ್ತೆಯಾಗಿದೆ. 441 ಜನರಲ್ಲಿ ಸೋಂಕು ಇರುವ ಶಂಕೆಯಿದೆ. ಮಹಾರಾಷ್ಟ್ರದಿಂದ ಸಮಾವೇಶಕ್ಕೆ ತೆರಳಿದ್ದ 252 ಮಂದಿಯ ಪಟ್ಟಿ ಲಭ್ಯವಾಗಿದ್ದು ಅವರ ಹುಡುಕಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಮಾವೇಶದಿಂದ ಸೋಂಕು ಮತ್ತಷ್ಟು ಏರಿಕೆ
ಹೊಸದಿಲ್ಲಿಯಲ್ಲಿ ಕಳೆದ ತಿಂಗಳು ಜರುಗಿದ ತಬ್ಲೀ – ಎ-ಜಮಾತ್‌ನ ಸಮಾವೇಶದ ಅನಂತರ ದೇಶದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ದೇಶದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 1,637ಕ್ಕೇರಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಮಂಗಳವಾರ-ಬುಧವಾರದ ಅವಧಿಯಲ್ಲಿ 386 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿಜಾಮುದ್ದೀನ್ ಸಮಾವೇಶದಿಂದ ಆಗಮಿಸಿರುವ 1,800 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ವಿವಿಧ ಆಸ್ಪತ್ರೆಗಳಲ್ಲಿ ನಿಗಾ ವಲಯದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ರೈಲ್ವೆ ಇಲಾಖೆಯು 3.2 ಲಕ್ಷ ಹಾಸಿಗೆ ಸಾಮರ್ಥ್ಯದ ಐಸೋಲೇಷನ್ ಹಾಗೂ ಕ್ವಾರಂಟೈನ್ ಬೋಗಿಗಳನ್ನು ತಯಾರಿಸುತ್ತಿದೆ ಅಗರ್ವಾಲ್ ಹೇಳಿದ್ದಾರೆ. ವಲಸೆ ಕಾರ್ಮಿಕರಿಗಾಗಿ ದೇಶಾದ್ಯಂತ 21,486 ಪರಿಹಾರ ಕ್ಯಾಂಪ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 6,75,133 ಜನರು ಆಶ್ರಯ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಐದು ರೈಲುಗಳ ಪ್ರಯಾಣಿಕರ ಹುಡುಕಾಟ
ನಿಜಾಮುದ್ದೀನ್ ಸಮಾವೇಶದಿಂದ ವಿವಿಧ ರಾಜ್ಯಗಳಿಗೆ ಹಿಂದಿರುಗಿದವರು ಪ್ರಯಾಣಿಸಿರುವ ಪ್ರಮುಖ ಐದು ರೈಲುಗಳಲ್ಲಿ ಇದ್ದ ಪ್ರಯಾಣಿಕರ ಶೋಧಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಮಾ. 13ರಿಂದ 19ರೊಳಗೆ, ದಿಲ್ಲಿಯಿಂದ ಪ್ರಯಾಣಿಸಿದ್ದ ಡುರೊಂಟೊ ಎಕ್ಸ್‌ಪ್ರೆಸ್ (ಆಂಧ್ರದ ಗುಂಟೂರು ಕಡೆಗೆ), ಗ್ರಾಂಡ್‌ಟ್ರಂಕ್ ಎಕ್ಸ್‌ಪ್ರೆಸ್ (ಚೆನ್ನೈ ಕಡೆಗೆ), ರಾಜಧಾನಿ ಎಕ್ಸ್‌ಪ್ರೆಸ್ (ರಾಂಚಿ ಕಡೆಗೆ) ಹಾಗೂ ಎ.ಪಿ. ಸಂಪರ್ಕ್ ಕ್ರಾಂತಿ ಎಕ್ಸ್‌ಪ್ರೆಸ್ (ಆಂಧ್ರದ ಕಡೆಗೆ) ರೈಲುಗಳ ಪ್ರಯಾಣಿಕರ ಪಟ್ಟಿಯನ್ನು ಜಾಲಾಡಲಾಗುತ್ತಿದೆ. ಅಜಿತ್ ದೋವಲ್ ಸಹಾಯ
ತಬ್ಲೀ ಯ ಕೇಂದ್ರ ಕಚೇರಿಗೆ ಹೊಂದಿಕೊಂಡಂತಿರುವ ಬಂಗ್ಲೇವಾಲಾ ಮಸೀದಿಯಲ್ಲೂ ಸಮಾವೇಶಕ್ಕೆ ಬಂದಿದ್ದವರು ಹಾಗೂ ತಬ್ಲೀ ಕಾರ್ಯಕರ್ತರು ಇರುವುದು ಮಾ. 28ರಂದೇ ದಿಲ್ಲಿ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮಾಹಿತಿ ಲಭಿಸಿತ್ತು. ಮಸೀದಿ ಪ್ರವೇಶಿಸಿ ಅವರೆಲ್ಲರನ್ನೂ ಅಲ್ಲಿಂದ ತೆರವುಗೊಳಿಸುವುದಕ್ಕೆ ಮಸೀದಿಯ ಮೌಲಾ ಆದ ಮೌಲಾನಾ ಸಾದ್ ಅವಕಾಶ ಕೊಟ್ಟಿರಲಿಲ್ಲ. ಆಗ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಕರೆ ಮಾಡಿ, ಮೌಲಾರ ಮನವೊಲಿಸಿದರು. ಅದಾದ ಅನಂತರವಷ್ಟೇ ತೆರವು ಕಾರ್ಯಾಚರಣೆ ಹಾದಿ ಸುಗಮವಾಯಿತು. ಇಂದು ಸಿಎಂಗಳೊಂದಿಗೆ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಗುರುವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ, ಬುಧವಾರ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.