ಉಡುಪಿ: ಜೂನ್ ತಿಂಗಳಲ್ಲಿ ಕನಿಷ್ಠ ಐವತ್ತು ಎಕರೆ ಹಡಿಲು ಬಿದ್ದ ಗದ್ದೆಯನ್ನು ನಾಟಿ ಮಾಡುವ ಉದ್ದೇಶ ನಮ್ಮದು. ಇದರ ಎಲ್ಲಾ ವೆಚ್ಚವನ್ನು ಸುವರ್ಣಪರ್ವ ಸಮಿತಿಯಿಂದ ಭರಿಸಿ ಕೃಷಿಕರನ್ನು ಪ್ರೋತ್ಸಾಹಿಸಲಾಗುವುದು. ಇದು ನಮ್ಮ ಸುವರ್ಣಪರ್ವದ ಬಹುಮುಖ್ಯ ಕಾರ್ಯಕ್ರಮವೆಂದು ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ನುಡಿದರು.
ಕೃಷಿ ಸಂಸ್ಕೃತಿಯನ್ನು ತನ್ನ ಶಾಲಾ ಪರಿಸರದಲ್ಲಿ ಉದ್ದೀಪನಗೊಳಿಸಬೇಕೆಂಬ ಉದ್ದೇಶದಿಂದ ಸುವರ್ಣ ಪರ್ವವನ್ನಾಚರಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆ ಪರಿಸರದ ಕೃಷಿಕರ ಸಮಾಲೋಚನ ಸಭೆಯನ್ನು ಮಾರ್ಚ್ 3, 2020 ರಂದು ಆಯೋಜಿಸಿತ್ತು.
ಸಭೆಯಲ್ಲಿ ಶಾಲಾ ಹಳೆವಿದ್ಯಾರ್ಥಿ ನಗರ ಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರಿಧರ ಆಚಾರ್ಯ, ಜಯಂತಿ ಪೂಜಾರಿ, ಭಾಸ್ಕರ ಡಿ. ಸುವರ್ಣ, ಬಾಲಕೃಷ್ಣ ಆಚಾರ್ಯ, ಪಿ. ಶಂಕರ ಶೆಟ್ಟಿ, ಪ್ರಭಾತ್ ಹೆಗಡೆ, ಆಲ್ಫ್ರೆಡ್ ಕರ್ನೇಲಿಯೋ, ರಾಘವೇಂದ್ರ ನಾಯ್ಕ, ಪ್ರಶಾಂತ ಭಟ್ ಅಮೂಲ್ಯ ಸಲಹೆಗಳನ್ನು ನೀಡಿ ಈ ಅರ್ಥಪೂರ್ಣ ಯೋಜನೆಯನ್ನು ಯಶಸ್ವಿಗೊಳಿಸಲು ನಾವೆಲ್ಲಾ ಶಾಲೆಯೊಂದಿಗಿದ್ದೇವೆ ಎಂಬ ಉತ್ಸಾಹದ ಮಾತುಗಳನ್ನಾಡಿದರು.
ಪಿ. ದಿನೇಶ್ ಪೂಜಾರಿ, ಕೃಷ್ಣಮೂರ್ತಿ ಭಟ್, ಕೆ. ಸುಬ್ರಹ್ಮಣ್ಯ ಭಟ್, ದಿನೇಶ್ ಶೆಟ್ಟಿ, ಪ್ರದೀಪ್ ಜೋಗಿ, ಮಾಧವ ಶೆಟ್ಟಿ, ಲ್ಯಾನ್ಸಿ, ಡಾ. ಪ್ರತಿಮಾ ಆಚಾರ್ಯ, ಹರೀಶ್ ಆಚಾರ್ಯ, ಸುಂದರ ಶೆಟ್ಟಿ, ಸುದರ್ಶನ ಆಚಾರ್ಯ ಹೀಗೆ ಕರಂಬಳ್ಳಿ, ಕಕ್ಕುಂಜೆ, ಪೆರಂಪಳ್ಳಿ, ಪುತ್ತೂರು, ನಿಟ್ಟೂರಿನ ಹಳೆ ವಿದ್ಯಾರ್ಥಿಗಳು, ಕೃಷಿಕರು ಹಾಗು ಶಾಲಾ ಅಧ್ಯಾಪಕವೃಂದ ಪಾಲುಗೊಂಡಿದ್ದರು. ಸದಾನಂದ ನಾಯಕ್ ನಿರ್ವಹಿಸಿದರು.