ಕಾರ್ಕಳ: ವಿದ್ಯಾರ್ಥಿಗಳನ್ನು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯವು ಜಪಾನ್‌ನ ರಿತ್ಸುಮೇಕನ್ ವಿ.ವಿ.ಯೊಂದಿಗೆ ಜಪಾನ್-ಏಷ್ಯ ಯುವಜನ ವಿಜ್ಞಾನ ಶೈಕ್ಷಣಿಕ ವಿನಿಮಯ ಒಪ್ಪಂದ ಮಾಡಿ ಕೊಂಡಿದೆ.
ತಾಂತ್ರಿಕ ಮಹಾವಿದ್ಯಾಲಯದ ಓರ್ವ ಪ್ರಾಧ್ಯಾಪಕ ಸೇರಿದಂತೆ 11 ಜನರ ತಂಡ ಜೂ.13ರಿಂದ 20ರ ವರೆಗೆ ಡ್ರೋನ್ ಟೆಕ್ನಾಲಜಿ ಆ್ಯಂಡ್ ಸಿಸ್ಟಮ್ ಇಂಟಿಗ್ರೇಶನ್ ಎಂಬ ವಿಷಯದ ಬಗ್ಗೆ ಜಪಾನ್‌ನ ರಿತ್ಸುಮೇಕನ್ ವಿ.ವಿ.ಯಲ್ಲಿ ನಡೆಯುವ ಸಕುರ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಜೆಎಸ್‌ಟಿ) ಈ ಉಚಿತ ವಿದ್ಯಾರ್ಥಿ ವಿಚಾರ ವಿನಿಮಯ ಕಾರ್ಯಕ್ರಮವನ್ನು ಪ್ರಾಯೋಜಿಸು ತ್ತಿದ್ದು ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಸಹಪ್ರಾಧ್ಯಾಪಕ ಸುಕೇಶ್ ರಾವ್ ಎಂ. ಅವರ ನೇತೃತ್ವದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ವಿದ್ಯಾರ್ಥಿಗಳಾದ ನಿರೀಕ್ಷಾ ಭಟ್, ರಿಯಾನ್ ಕ್ಲೈವ್ ಫೆರ್ನಾಂಡಿಸ್, ಆದಿತ್ಯ ಎಂ.ಡಿ. ಹಾಗೂ ಇನಾ#ರ್ಮೇಶನ್ ಸೈನ್ಸ್ ವಿಭಾಗದ ಯೋಗೀಶ್ ಪೈ, ಕಂಪ್ಯೂಟರ್ ಸೈನ್ಸ್ ವಿಭಾಗದ ಗ್ಲೆನ್ ಥಾಮಸ್ ಎಲೆಕ್ಸ್, ವರ್ಷಾ ಪ್ರಭು, ಅಮಿತಾ ಪಡಿಯಾರ್, ಮೆಕ್ಯಾನಿಕಲ್ ವಿಭಾಗದ ರಾಹುಲ್ ಪೈ, ಸಚಿನ್ ಫ್ರಾನ್ಸಿಸ್ ಡಿ’ಸೋಜಾ ಮತ್ತು ಇಲೆಕ್ಟ್ರಿಕಲ್ ವಿಭಾಗದ ನಿಕಿತಾ ನಾಯಕ್ ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.
ತಂತ್ರಜ್ಞಾನದ ಬೆಳವಣಿಗೆ, ಸಂಶೋಧನಾ ಚಟುವಟಿಕೆ ಹಾಗೂ ವೃತ್ತಿಪರ ಅನುಭವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣRರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.