Advertisement
ಇಲ್ಲಿನ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಅರುಣ್ ಇಸ್ಲೂರ್ ನೇತೃತ್ವದ ತಂಡ ಸಂಶೋಧನೆಯಲ್ಲಿತೊಡಗಿದ್ದು, ಶೇ. 70ರಷ್ಟು ಪೊರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರು ಶುದ್ಧೀಕರಿಸುವ ಯೋಜನೆ ಯಶಸ್ವಿಯಾಗಿದೆ. ಈಗಿರುವ ಪೊರೆ ತಂತ್ರಜ್ಞಾನ ವಿದೇಶದಲ್ಲಿ ಪ್ರಚಲಿತದಲಿದ್ದು, ದೇಶದಲ್ಲಿ ಸಾಮಾನ್ಯ ವ್ಯವಸ್ಥೆ ಮೂಲಕವೇ ನೀರು ಶುದ್ಧೀ ಕರಿಸುವ ವ್ಯವಸ್ಥೆಯಿದೆ.
Related Articles
Advertisement
ಅಪಾಯಕಾರಿ ಆರ್ಸೆನಿಕ್ ಅಂಶವು ಉಗುರುಗಳಲ್ಲಿ ಪತ್ತೆಯಾಗಿ ಬಳಿಕ ನಿಧಾನವಾಗಿ ಕಿಡ್ನಿ, ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಗೆಡವುತ್ತದೆ.
ಸಮುದ್ರದ ನೀರು ಸಂಸ್ಕರಣೆರಾಜ್ಯ ಸರಕಾರದ ಪಂಚಾಯತ್ ರಾಜ್, ಗ್ರಾಮೀಣ ನೀರು ಸರಬರಾಜು ಇಲಾಖೆ ನೀರಿನ ಅಭಾವವಿರುವ ಗ್ರಾಮಗಳಿಗೆ ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಸಂಸ್ಕರಿಸಿ ಪೂರೈಸಲು ನಿರ್ಧರಿಸಿದ್ದು, 24 ಲಕ್ಷ ಲೀಟರ್ ನಿತ್ಯ ಕುಡಿಯುವ ನೀರನ್ನು ಸಮುದ್ರದಿಂದ ಸಂಸ್ಕರಿಸಿ ಪೂರೈಕೆ ಮಾಡಲು ಯೋಜನಾ ವರದಿ ನೀಡಲು ಎನ್‌ಐಟಿಕೆಗೆ ಸೂಚಿಸಿದೆ. ಪೊರೆ ತಂತ್ರಜ್ಞಾನದ ಮೂಲಕ ಪ್ರಥಮ ಪ್ರಾಯೋಗಿಕ ಘಟಕ ಕರಾವಳಿಯಲ್ಲಿ ಸ್ಥಾಪನೆಯಾಗುವ ಸಾಧ್ಯತೆಯಿದೆ.ಸರಕಾರದ ಪೊರೆ ತಂತ್ರಜ್ಞಾನದ ವಿಶೇಷ ತಾಂತ್ರಿಕ ಸಲಹೆಗಾರರೂ ಆಗಿರುವ ಡಾ| ಅರುಣ್ ಇಸ್ಲೂರ್ ಈ ಕುರಿತ ವರದಿಯನ್ನು ಸರಕಾರಕ್ಕೆ ನೀಡಲಿದ್ದಾರೆ. ಪರಿಣಾಮಕಾರಿ ತಂತ್ರಜ್ಞಾನ
ನೀರನ್ನು ಕುದಿಸಿದರೂ ಆರ್ಸೆನಿಕ್ ಕಡಿಮೆಯಾಗದು. ಅದಕ್ಕೆ ಶುದ್ಧೀಕರಣವೇ ಪರಿಹಾರ. ಇದಕ್ಕಾಗಿ ಎನ್‌ಐಟಿಕೆ ರಸಾಯನ ಶಾಸ್ತ್ರ ವಿಭಾಗದಲ್ಲಿ 7 ವರ್ಷ ಗಳಿಂದ ಪೊರೆ ತಂತ್ರಜ್ಞಾನವನ್ನು ಬಳಸಿ ಮಿತವ್ಯಯದಲ್ಲಿ ನೀರನ್ನು ಶುದ್ಧೀಕರಿಸುವ ಸಂಶೋಧನೆ ನಡೆಯುತ್ತಿದೆ. ಶೇ. 70ರಷ್ಟು ಯಶಸ್ಸು
ಶೇ. 70ರಷ್ಟು ಯಶಸ್ಸು ಸಿಕ್ಕಿದೆ. ಗುಣಮಟ್ಟದ ಹಾಗೂ ಮಿತವ್ಯಯದ ವಯರ್‌ಗಳನ್ನು ಬಳಸಿ ಪೊರೆ ತಂತ್ರಜ್ಞಾನದ ಮೂಲಕ ನೀರು ಫಿಲ್ಟರ್ ಮಾಡುವ ಯೋಜನೆ ಯಶಸ್ವಿಯಾದಲ್ಲಿ ಸಣ್ಣ ಜಾಗದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅವಕಾಶವಾಗಲಿದೆ. ಜತೆಗೆ ಆರ್‌ಒ ತಂತ್ರಜ್ಞಾನಕ್ಕಿಂತ ಪೊರೆ ತಂತ್ರಜ್ಞಾನಕ್ಕೆ ಕಡಿಮೆ ವಿದ್ಯುತ್ ಸಾಕಾಗುತ್ತದೆ. ಇದರಲ್ಲಿ ಮರು ಬಳಕೆಗೂ ಅವಕಾಶವಿದೆ. ಸಂಶೋಧನೆ ಪೂರ್ಣಗೊಂಡು ಅದರ ಗುಣಮಟ್ಟ ಪರೀಕ್ಷೆ ಆದ ಬಳಿಕ ಬಳಸುವ ಯೋಜನೆ ಕುರಿತಂತೆ ಸರಕಾರಕ್ಕೆ ವರದಿ ಕಳಿಸಲಾಗುತ್ತದೆ .
ಡಾ| ಅರುಣ್ ಇಸ್ಲೂರ್
ಸಹ ಪ್ರಾಧ್ಯಾಪಕ, ರಸಾಯನ ಶಾಸ್ತ್ರ ವಿಭಾಗ, ಎನ್‌ಐಟಿಕೆ