Advertisement
ಬಾಲ್ಯದಲ್ಲೇ ಅಂಗವೈಕಲ್ಯ ಕ್ಕೊಳಗಾದ ನಿತೀಶ್ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನೂ ಪಡೆಯದೆ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಶೇ. 41.44 ಪಡೆದು ತೇರ್ಗಡೆಯಾಗಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 296 ಅಂಕ ಗಳಿಸಿ ಎಲ್ಲರಿಗೂ ಮಾದರಿ ಯಾಗಿದ್ದಾನೆ.
ತೆಕ್ಕಟ್ಟೆ ಸ. ಪ.ಪೂ. ಕಾಲೇಜಿನಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಹಂಬಲ ವ್ಯಕ್ತಪಡಿಸಿದಾಗ ಈತನಿಗೆ ಮಾರ್ಗದರ್ಶನ ನೀಡಲು ಮುಂದಾದವರು ನೆರೆ ಮನೆಯ ಬಿ.ಕಾಂ. ಪದವೀಧರೆ ದೀಕ್ಷಾ ದೇವಾಡಿಗ. 10 ತಿಂಗಳಿನಿಂದಲೂ ಬೆಳಗ್ಗೆ, ಸಂಜೆ ನಿರಂತರ ಶಿಕ್ಷಣ ಮಾರ್ಗದರ್ಶನ ನೀಡಿದ ಪರಿಣಾಮ ನಿತೀಶ್ ಬದುಕಿನಲ್ಲಿ ಶಿಕ್ಷಣದ ಹೊಸ ಬೆಳಕು ಮೂಡುವಂತಾಗಿದೆ. ಶಾಲೆಯ ಮೆಟ್ಟಿಲು ಹತ್ತದೆ ಪುಸ್ತಕವನ್ನೇ ಗೆಳೆಯರನ್ನಾಗಿಸಿಕೊಂಡು ಸಾಧನೆ ಬೆನ್ನೇರಿ ಹೊರಡುವಲ್ಲಿ ಸಫಲರಾಗಿದ್ದಾರೆ.
Related Articles
20 ವರ್ಷಗಳಿಂದಲೂ ಗಾಲಿ ಕುರ್ಚಿಯಲ್ಲಿಯೇ ಕುಳಿತು ಮಾಹಿತಿ ತಂತ್ರಜ್ಞಾನ, ಮೊಬೈಲ್ ಸಾಫ್ಟ್‌ವೇರ್ ತಂತ್ರಜ್ಞಾನ ಮತ್ತು ಮೋಟರ್ ವೈಂಡಿಂಗ್ ಇತ್ಯಾದಿ
ಹಲವು ವಿಷಯಗಳ ಬಗ್ಗೆ ಮಾಹಿತಿ ತಿಳಿಯುವ ಈತನ ಆಸಕ್ತಿಯನ್ನು ಗುರುತಿಸಿ ಸಾಥ್ ನೀಡಿದವರೇ ಪರಿಸರದ ಸ್ನೇಹಿತರು.
Advertisement
– ಟಿ. ಲೋಕೇಶ್ ಆಚಾರ್ಯ