ಗುವಾಹಟಿ : ಬಿಹಾರದ ಮುಖ್ಯಮಂತ್ರಿ ಮತ್ತು ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷ ‘ಸಂಯುಕ್ತ ಜನತಾ ದಳ’ದ ಮುಖ್ಯಸ್ಥ ನಿತೀಶ್ ಕುಮಾರ್ ಅವರ ಪಕ್ಷದ ಅತೃಪ್ತ ಏಳು ಶಾಸಕರ ಪೈಕಿ ಐವರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೈತ್ರಿಯಿಂದ ಹೊರನಡೆದ ಒಂದೇ ವಾರದಲ್ಲಿ ಪಕ್ಷದಲ್ಲಿ ಭಾರಿ ಬೆಳವಣಿಗೆ ನಡೆದಿದೆ.
ಜೆಡಿಯು ಶಾಸಕರಾದ ಕೆ.ಎಚ್. ಜೋಯ್ಕಿಶನ್, ಎನ್.ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್ ಎಂ ಖೌಟೆ ಮತ್ತು ತಂಗಜಮ್ ಅರುಣ್ ಕುಮಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈಶಾನ್ಯದಲ್ಲಿ ನಿತೀಶ್ ಕುಮಾರ್ ಪಕ್ಷದ ಶಾಸಕರನ್ನು ಬಿಜೆಪಿ ಗುರಿಯಾಗಿಸಿದ್ದು ಇದು ಎರಡನೇ ಬಾರಿ. 2020 ರಲ್ಲಿ, ಅರುಣಾಚಲ ಪ್ರದೇಶದಲ್ಲಿ ಏಳು ಜೆಡಿಯು ಶಾಸಕರ ಪೈಕಿ ಆರು ಮಂದಿ ಬಿಜೆಪಿ ಸೇರಿದ್ದರು ಮತ್ತು ಕಳೆದ ವಾರ ಏಕೈಕ ಶಾಸಕರು ಸಹ ಬಿಜೆಪಿಯಲ್ಲಿ ವಿಲೀನಗೊಂಡಿದ್ದರು.
ಮಣಿಪುರ ವಿಧಾನಸಭೆಯ ಸ್ಪೀಕರ್ ಕೂಡ ಜನತಾದಳ ಯುನೈಟೆಡ್ ಶಾಸಕರು ಬಿಜೆಪಿಯೊಂದಿಗಿನ ವಿಲೀನಕ್ಕೆ ಅನುಮೋದನೆ ನೀಡಿದ್ದಾರೆ.
ಇದನ್ನೂ ಓದಿ : ಜೀವ ಅಪಾಯದಲ್ಲಿದೆ… ವೈದ್ಯಕೀಯ ನೆರವು ನೀಡಿ : ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ