Advertisement

ಮತ್ತೆ NDA ಜತೆ ಕೈಜೋಡಿಸಿದ ನಿತೀಶ್ ನೇತೃತ್ವದ JDU

02:57 PM Aug 19, 2017 | Sharanya Alva |

ಪಾಟ್ನ: ಕೊನೆಗೂ ನಿರೀಕ್ಷೆಯಂತೆ ನಾಲ್ಕು ವರ್ಷಗಳ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು (ಜನತಾ ದಳ ಸಂಯುಕ್ತ) ಪಕ್ಷ ಬಿಜೆಪಿ ನೇತೃತ್ವದ ಎನ್ ಡಿಎ ಜತೆ ಸೇರಲು ಅಧಿಕೃತವಾಗಿ ನಿರ್ಧರಿಸಿದೆ. ಪಾಟ್ನಾದಲ್ಲಿ ಶನಿವಾರ ಪಕ್ಷದ ಮುಖಂಡರ ಜತೆ ಚರ್ಚಿಸಿದ ಬಳಿಕ ಎನ್ ಡಿಎ ಸೇರ್ಪಡೆಯಾಗುವುದಾಗಿ ಘೋಷಿಸಿದೆ.

Advertisement

ಭಾರತೀಯ ಜನತಾ ಪಕ್ಷ ಮತ್ತು ಸಂಯುಕ್ತ ಜನತಾದಳ(ಜೆಡಿಯು) ಸುಮಾರು 2 ದಶಕಗಳ ಕಾಲ ಮೈತ್ರಿಕೂಟವಾಗಿದ್ದವು. ಏತನ್ಮಧ್ಯೆ 2013ರಲ್ಲಿ ಜೆಡಿಯು ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು.  ಬಿಜೆಪಿ ಹಣಿಯಲು ಸಿದ್ಧವಾಗಿದ್ದ ಮಹಾಮೈತ್ರಿಕೂಟದಿಂದ ಕಳೆದ ತಿಂಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೊರಬಂದಿದ್ದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ ನಿತೀಶ್ ಕುಮಾರ್ ಅವರು ಜುಲೈ 26ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಅಲ್ಲದೇ ಬಿಹಾರದಲ್ಲಿ ಆರ್ ಜೆಡಿ ಮೈತ್ರಿಕೂಟಕ್ಕೆ ಎಳ್ಳುನೀರು ಬಿಟ್ಟಿದ್ದರು.

ಬಳಿಕ ತನ್ನದು ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು. ಈ ಬೆಳವಣಿಗೆ ನಂತರ ನಿತೀಶ್ ಕುಮಾರ್ ಗೆ ಬೆಂಬಲ ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ತದನಂತರ ಬಿಜೆಪಿ, ಜೆಡಿಯು ಸೇರಿ ಬಿಹಾರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೇರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next