Advertisement
ಎಕನಾಮಿಕ್ ಟೈಮ್ಸ್ ಜಾಗತಿಕ ಉದ್ದಿಮೆ ಶೃಂಗದ 7ನೇ ಆವೃತ್ತಿಯಲ್ಲಿ ಮಾತನಾಡಿರುವ ಸಚಿವ ಗಡ್ಕರಿ, 2025ರ ವೇಳೆಗೆ 2 ಲಕ್ಷ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗ ಇದು 96 ಸಾವಿರ ಕಿ.ಮೀ. ಆಗಿತ್ತು. ಈಗ ಅದು 1.46 ಲಕ್ಷ ಕಿ.ಮೀ.ಗೆ ತಲುಪಿದೆ ಎಂದೂ ಹೇಳಿದ್ದಾರೆ.
ನಮ್ಮ ಸಚಿವಾಲಯವು 6 ವಿಶ್ವದಾಖಲೆಗಳನ್ನು ಪಡೆದಿದೆ. ದಿನಕ್ಕೆ 38 ಕಿ.ಮೀ. ಹೆದ್ದಾರಿ ನಿರ್ಮಾಣ, ಅಮರಾವತಿ-ಅಕೋಲಾ ಸೆಕ್ಷನ್‌ನಲ್ಲಿ ಕೇವಲ 105 ಗಂಟೆಗಳು ಮತ್ತು 33 ನಿಮಿಷಗಳಲ್ಲಿ 75 ಕಿ.ಮೀ. ಉದ್ದದ ಏಕಪಥದ ಬಿಟುಮಿನಸ್ ಕಾಂಕ್ರೀಟ್ ರಸ್ತೆ, ಕೇವಲ 18 ಗಂಟೆಗಳಲ್ಲಿ ವಿಜಯಪುರ-ಸೋಲಾಪುರ ಏಕಪಥದ ಬಿಟುಮಿನಸ್ ರಸ್ತೆ (26 ಕಿ.ಮೀ.) ಹಾಗೂ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೈವೇಯಲ್ಲಿ 24 ಗಂಟೆಗಳ ಅವಧಿಯಲ್ಲಿ 2.5 ಕಿ.ಮೀ. ಚತುಷ್ಪಥ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ನಾವು ದಾಖಲೆ ಬರೆದಿದ್ದೇವೆ ಎಂದೂ ಗಡ್ಕರಿ ಸ್ಮರಿಸಿದ್ದಾರೆ.