ನಾಗ್ಪುರ: ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನೆ ಮತ್ತು ಕಚೇರಿಗೆ ಮಂಗಳವಾರ ವ್ಯಕ್ತಿಯೊಬ್ಬರು ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಈ ಕುರಿತು ನಾಗ್ಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಬೆದರಿಕೆ ಕರೆ ಮಾಡಿರುವ ವ್ಯಕ್ತಿಯ ಪತ್ತೆಗೆ ಬಲೆ ಬಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸರು ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಎರಡು ಬಾರಿ ಬೆದರಿಕೆ ಕರೆಗಳು ಬಂದಿದ್ದು 10 ಕೋಟಿ ರೂಪಾಯಿ ನೀಡಿ ಇಲ್ಲದಿದ್ದರೆ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಹೇಳಿಕೊಂಡ ವ್ಯಕ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಈ ಕುರಿತು ಸಚಿವರ ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿಯೂ ಬಂದಿತ್ತು ಬೆದರಿಕೆ ಕರೆ
ಇದೇ ವರ್ಷಾರಂಭದಲ್ಲಿ ಸಚಿವ ಗಡ್ಕರಿಯವರ ಮನೆ ಹಾಗೂ ಕಚೇರಿಗೆ ಬೆದರಿಕೆ ಕರೆಗಳು ಬಂದಿದ್ದು ಈ ವೇಳೆ ವ್ಯಕ್ತಿ 100 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಅಲ್ಲದೆ ತಾನು ದಾವೂದ್ ಇಬ್ರಾಹಿಂನ ಬಂಟನೆಂದು ಹೇಳಿಕೊಂಡಿದ್ದ.
ಇದನ್ನೂ ಓದಿ: 80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ