Advertisement

ರಾಜ್ಯದ ಹಲವು ಹೆದ್ದಾರಿಗಳ ಉನ್ನತೀಕರಣ: ನಿತಿನ್‌ ಗಡ್ಕರಿ

10:15 PM Mar 23, 2023 | Team Udayavani |

ನವದೆಹಲಿ: ಕರ್ನಾಟಕದ ಹೊನ್ನಾವರ-ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಹೆದ್ದಾರಿಗಳನ್ನು ಉನ್ನತೀಕರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, “653 ಕೋಟಿ ರೂ. ವೆಚ್ಚದಲ್ಲಿ ಎನ್‌ಎಚ್‌-69, ಬೆಂಗಳೂರು-ಚಿತ್ತೂರು ಮಾರ್ಗವನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುವುದು. ಸಿಂದಿಗೇರಿ-ಬಳ್ಳಾರಿ ರಸ್ತೆ ವಿಸ್ತರಣೆಗೆ 120.5 ಕೋಟಿ ರೂ. ಮೀಸಲಿಡಲಾಗಿದೆ. ಎನ್‌-150 ಎ ಮಾರ್ಗದಲ್ಲಿ 19.8 ಕಿ.ಮೀ. ರಸ್ತೆ ವಿಸ್ತರಣೆಯಾಗಲಿದೆ,’ ಎಂದು ಹೇಳಿದ್ದಾರೆ.

“142 ಕೋಟಿ ರೂ. ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ವೆಂಕಟೇಶ್ವರ ಕ್ಯಾಂಪ್‌ನಿಂದ ದಡೆಸೊಗೂರು ಕ್ಯಾಂಪ್‌ ರಸ್ತೆವರೆಗೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ 2022-23ನೇ ಸಾಲಿನಲ್ಲಿ ಎಕ್ಸ್‌ಪ್ರೆಸ್‌ ಕಾರಿಡಾರ್‌ ಮಾದರಿಯಲ್ಲಿ 6,910 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next