Advertisement
ಬಾಲಿವುಡ್ ನ ಕಲಾ ನಿರ್ದೇಶಕ ನಿತಿನ್ ದೇಸಾಯಿ (57) ಮುಂಬಯಿಯ ಕರ್ಜಾತ್ ಬಳಿಯ ಖಲಾಪುರ್ ರಾಯ್‌ಗಢ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Related Articles
Advertisement
ನಿತಿನ್ ದೇಸಾಯಿ ಅವರು ಇಂದು (ಬುಧವಾರ ಆ.2 ರಂದು) ಮುಂಜಾನೆ 4:30 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದುರಂತವೆಂದರೆ ಆಗಸ್ಟ್ 9 ರಂದು ಅವರ 58ನೇ ಹುಟ್ಟುಹಬ್ಬವಿತ್ತು.
ಬಾಲಿವುಡ್ ನ ‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಮತ್ತು ‘ಲಗಾನ್’ ಸಿನಿಮಾಗಳಲ್ಲಿ ಅದ್ಧೂರಿ ಸೆಟ್ ಗಳ ವಿನ್ಯಾಸವನ್ನು ಮಾಡಿ ಖ್ಯಾತಿಯಾಗಿದ್ದರು. 20 ವರ್ಷದ ತನ್ನ ವೃತ್ತಿ ಜೀವನದಲ್ಲಿ ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
2002 ರಲ್ಲಿ ಚಂದ್ರಕಾಂತ್ ಪ್ರೊಡಕ್ಷನ್ಸ್‌ನಲ್ಲಿ “ದೇಶ್ ದೇವಿ” ಎನ್ನುವ ಭಕ್ತಿ ಪ್ರಧಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 2005 ರಲ್ಲಿ, ಅವರು ಮುಂಬೈ ಸಮೀಪದ ಕರ್ಜತ್‌ನಲ್ಲಿ 52 ಎಕರೆ ಪ್ರದೇಶದಲ್ಲಿ ತಮ್ಮ ಎನ್ ಡಿ ಸ್ಟುಡಿಯೋವನ್ನು ತೆರೆದಿದ್ದರು. ಇವರ ಸ್ಟುಡಿಯೋದ ಪ್ರದೇಶದಲ್ಲಿ ʼಜೋಧಾ ಅಕ್ಬರ್ʼ, ʼಟ್ರಾಫಿಕ್ ಸಿಗ್ನಲ್ʼ ಶೋ ಬಿಗ್ ಬಾಸ್‌ನಂತಹ ಶೋಗಳ ಶೂಟ್ ಆಗಿದೆ.