Advertisement

ಕೈಲಾಶಿಯನ್‌ ಡಾಲರ್‌ ರಿಲೀಸ್‌ ಮಾಡಿದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ

01:40 PM Aug 24, 2020 | sudhir |

ಹೊಸದಿಲ್ಲಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, ತಾನೇ ಕಟ್ಟಿರುವುದಾಗಿ ಹೇಳಿಕೊಂಡಿರುವ ಕೈಲಾಸ ರಾಷ್ಟ್ರದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಕೈಲಾಸ ಎಂಬ ಬ್ಯಾಂಕ್‌ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ. ಇದರ ಜತೆಗೆ ಪ್ರಮುಖ ಅಂಶವೇನೆಂದರೆ “ಕೈಲಾಶಿಯನ್‌ ಡಾಲರ್‌’ ಎಂಬ ಕರೆನ್ಸಿಯನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೈಲಾಸ ರಾಷ್ಟ್ರ ರಾಜ ತಾಂತ್ರಿಕವಾಗಿ ಒಪ್ಪಂದ ಮಾಡಿಕೊಳ್ಳುವ ರಾಷ್ಟ್ರದ ಜತೆಗೆ ಅದನ್ನು ಚಲಾವಣೆಗೆ ತರಲು ಪ್ರಯತ್ನಿಸಲಾಗುತ್ತದೆ ಎಂದಿದ್ದಾನೆ.

Advertisement

77 ಬಂಗಾರದ ನಾಣ್ಯಗಳು: ರಿಸರ್ವ್‌ ಬ್ಯಾಂಕ್‌ ಆಫ್ ಕೈಲಾಸದಿಂದ ಎಂಟು ರೀತಿಯ ಮುಖಬೆಲೆಯುಳ್ಳ 77 ಬಂಗಾರದ ನಾಣ್ಯಗಳನ್ನು ಬಿಡುಗಡೆ ಮಾಡಲಾ ಗಿದೆ. ಒಂದು ಕೈಲಾಶಿಯನ್‌ ಡಾಲರ್‌ ನಾಣ್ಯವು 1 ತೊಲ ಬಂಗಾರಕ್ಕೆ ಸರಿಸಮನಾಗಿರಲಿದೆ. ಅಂದರೆ ಒಂದು ಕೈಲಾಶಿಯನ್‌ ಡಾಲರ್‌ನಲ್ಲಿ 11.66 ಚಿನ್ನ ಇರಲಿದ್ದು, ಕಾಲು ಭಾಗದ ಕೈಲಾಶಿಯನ್‌ ಡಾಲರ್‌ನಲ್ಲಿ 2.91 ಗ್ರಾಂ ಚಿನ್ನ, ಅರ್ಧ ಕೈಲಾ ಶಿಯನ್‌ ಡಾಲರ್‌ನಲ್ಲಿ 5.81 ಗ್ರಾಂ ಚಿನ್ನ ಹಾಗೂ ಮುಕ್ಕಾಲು ಭಾಗದ ಕೈಲಾಶಿಯನ್‌ ಡಾಲರ್‌ನಲ್ಲಿ 8.77 ಗ್ರಾಂನಷ್ಟು ಚಿನ್ನ ಇರಲಿದೆ. 2 ಕೈಲಾಶಿಯನ್‌ ಡಾಲರ್‌ಗಳು ಸೇರಿದರೆ ಒಟ್ಟು 23.32 ಗ್ರಾಂ ಚಿನ್ನವಾಗಲಿದೆ ಎಂದು ನಿತ್ಯಾನಂದ ವಿವರಿಸಿದ್ದಾನೆ. ತನ್ನ ಫೇಸ್‌ಬುಕ್‌ ಪುಟ KAILASA’s HDH Nithyananda Paramashivam ನಲ್ಲಿ ಈ ಕುರಿತಂತೆ ಪ್ರಕಟನೆೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next