ಮುಂಬಯಿ, ಫೆ. 2: ನಿತ್ಯಾನಂದ ಸೇವಾ ಸಂಸ್ಥೆ ಮೀರಾ-ಭಾಯಂದರ್ ಇದರ 11ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆ. 1ರಂದು ರಾತ್ರಿ ನಮ್ಮಯ ನಡಿಗೆ ಸ್ವಾಮಿಯ ನಡೆಗೆ ಶ್ರೀ ಕ್ಷೇತ್ರ ಗಣೇಶಪುರಿ ಪಾದಯಾತ್ರೆಯು ಮೀರಾರೋಡ್ ಸಿಲ್ವರ್ ಪಾರ್ಕ್ ಆವರಣದಲ್ಲಿರುವ ಶ್ರೀ ದುರ್ಗಾ ಮಂದಿರದಿಂದ ಪ್ರಾರಂಭಗೊಂಡಿತು.
ಶ್ರೀ ನಿತ್ಯಾನಂದ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ ಮಹಾಬಲ ಸಿ. ಸಮಾನಿ ಮಾತನಾಡಿ, ಹೇಳಿದ್ದನ್ನೇ ಮಾಡು, ಮಾಡಿದ್ದನೇ ಹೇಳು ಎನ್ನುವ ಪರಬ್ರಹ್ಮ ಸ್ವರೂಪಿ ಅವಧೂತ ಭಗವಾನ್ ನಿತ್ಯಾನಂದರು ವಿಶ್ವ ಕಂಡ ಶ್ರೇಷ್ಠ ಸಾಧಕರು. ಭಕ್ತರಿಂದ ಏನನ್ನೂ ಅಪೇಕ್ಷಿಸಿದ ಅವರು ಮಾತಾ-ಪಿತರ ಸೇವೆಯಿಂದ ಭಗವಂತನ ಸಾನ್ನಿಧ್ಯ ಪಡೆಯಲು ಸಾಧ್ಯ. ಅವರ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸುವುದು ಭಕ್ತರು ಆರ್ಪಿಸುವ ಕಾಣಿಕೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಗೌರವ ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅಮಾಸೆಬೈಲು ಮಾತನಾಡಿ, ಪಾದಯಾತ್ರೆಯ ರೂಪು ರೇಷೆಗಳ ಬಗ್ಗೆ ವಿವರಿಸಿದರು. ಕಳೆದ 10 ವರ್ಷ ಗಳಿಂದ ಇಂದಿನವರೆಗೆ ಪಾದ ಯಾತ್ರೆಯ ಭಕ್ತರಿಗೆ ಊಟದ ವ್ಯವಸ್ಥೆಯನ್ನು ವಿರಾರ್- ಗಣೇಶ್ ಪುರಿ ಕ್ರಾಸ್ ನಲ್ಲಿರುವ ಶಿವಾನಿ ಹೊಟೇಲಿನ ಮಾಲಕ ಹರೀಶ್ ಭಂಡಾರಿ ಅವರು ನೀಡಿ ಸಹಕರಿಸುತ್ತಿದ್ದಾರೆ. ಲಘು ಉಪಾಹಾರ, ಉಚಿತ ಬಸ್ಸಿನ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಕಲ್ಪಿಸಲಾಗಿದೆ ಎಂದ ಅವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಚಾಲಕ ಆನಂದ ಎನ್. ಶೆಟ್ಟಿ, ಅಧ್ಯಕ್ಷ ಗೋಪಾಲಕೃಷ್ಣ ಜಿ. ಗಾಣಿಗ, ಉಪಾಧ್ಯಕ್ಷೆ ವಸಂತಿ ಶೆಟ್ಟಿ, ಜತೆ ಕಾರ್ಯದರ್ಶಿ ವಿಜಯಲಕ್ಷೀ ಡಿ. ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಕಾಂತ್ ಶೆಟ್ಟಿ ಕರ್ಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಬಿ. ಶೆಟ್ಟಿ, ಉಪಾಕಾರ್ಯಧ್ಯಕ್ಷೆರಾದ ಸುನೀತಾ ಶೆಟ್ಟಿ, ಎಸ್. ಆರ್. ಶೆಟ್ಟಿ, ಕಾರ್ಯದರ್ಶಿ ಕಸ್ತೂರಿ ಪಿ. ಶೆಟ್ಟಿ, ಯುವ ವಿಭಾಗದ ರಾಜೇಶ್ ಶೆಟ್ಟಿ ಕಾಪು, ಕಾರ್ಯದರ್ಶಿ ಧೀರಜ್ ಎ. ಶೆಟ್ಟಿ, ಮುಖ್ಯ ಸಲಹೆಗಾರ ಗುಣಪಾಲ ಉಡುಪಿ, ನಾರಾಯಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ ಮತ್ತು ಸರ್ವ ಸದಸ್ಯರು ಸಹಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಭಜನ ಮಂಡಳಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಸಂತೋಷ ರೈ ಬೆಳ್ಳಿಪಾಡಿ, ದಿವಾಕರ ಶೆಟ್ಟಿ, ಮಧುಕರ ಶೆಟ್ಟಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಎಂ. ಟಿ. ಪೂಜಾರಿ, ಚಂದ್ರಹಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್