Advertisement

ಸಚಿವ ಗಡ್ಕರಿ ಬ್ರ್ಯಾಂಡ್‌ ಅಂಬಾಸಡರ್‌ : ಜೈಪುರದಲ್ಲಿ ದೇಶದ ಮೊದಲ ಸೆಗಣಿ ಪೇಂಟ್‌ ಘಟಕ ಆರಂಭ

01:29 AM Jul 07, 2021 | Team Udayavani |

ಹೊಸದಿಲ್ಲಿ/ಜೈಪುರ: ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ನಿತಿನ್‌ ಗಡ್ಕರಿ ಈಗ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾರಂತೆ. ಈ ಬಗ್ಗೆ ಅವರೇ ಘೋಷಿಸಿಕೊಂಡಿದ್ದಾರೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ವತಿಯಿಂದ ಸೆಗಣಿಯಿಂದ ತಯಾರಿಸಲಾಗುವ ದೇಶದ ಏಕೈಕ ಮತ್ತು ಮೊದಲ ಪೇಂಟ್‌ ತಯಾರಿಕ ಘಟಕವನ್ನು ಮಂಗಳವಾರ ಉದ್ಘಾಟಿಸಿದ ಸಂದರ್ಭದಲ್ಲಿ ಈ ಮಾತುಗಳನ್ನಾಡಿದ್ದಾರೆ.

Advertisement

ದೇಶಾದ್ಯಂತ ಯುವ ಉದ್ಯಮಿಗಳು ಸೆಗಣಿಯಿಂದ ಪೇಂಟ್‌ ಸಿದ್ಧಪಡಿಸುವ ಘಟಕ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಇಂಥ ಕ್ರಮದ ಮೂಲಕ ತಾಂತ್ರಿಕ ಕ್ಷೇತ್ರದ ನಾವೀನ್ಯತೆ ಬಳಸಿಕೊಂಡು ಗ್ರಾಮೀಣ ಮತ್ತು ಕೃಷಿ ಆಧರಿತ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡು ಕೊಳ್ಳಬೇಕಾಗಿದೆ ಎಂದರು. ನಾಗ್ಪುರದಲ್ಲಿ ಅವರು ನೂತನವಾಗಿ ನಿರ್ಮಿಸುತ್ತಿರುವ ಮನೆಗೆ 1 ಸಾವಿರ ಲೀಟರ್‌ ಸೆಗಣಿಯ ಪೇಂಟ್‌ ಅನ್ನೇ ಖರೀದಿಸಿ ಬಳಕೆ ಮಾಡುವುದಾಗಿ ಘೋಷಿಸಿದ್ದಾರೆ. ಸದ್ಯ ಘಟಕದಲ್ಲಿ 500 ಲೀಟರ್‌ ಪೇಂಟ್‌ ಉತ್ಪಾದಿಸುವ ಸಾಮರ್ಥ್ಯ ಇದ್ದು, ಅದನ್ನು 1 ಸಾವಿರ ಲೀಟರ್‌ಗೆ ಪರಿಷ್ಕರಿಸಲಾಗುತ್ತದೆ. ಡಿಸ್ಟೆಂಪರ್‌ ಮತ್ತು ಎಮಲ್ಶನ್‌ ಎಂಬ 2 ವಿಧಗಳಲ್ಲಿ ಲಭ್ಯವಾಗಲಿದೆ.

ಲಾಭವೇನು?: ಹೊಸ ಮಾದರಿಯ ಪೇಂಟ್‌ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಪ್ರತಿಬಂಧಕ ಗುಣ ಹೊಂದಿದೆ. ಪ್ರಾಕೃತಿಕ ಸ್ನೇಹಿ, ವಿಷಕಾರಿಯಲ್ಲ, ವಾಸನೆ ರಹಿತ, ಹೆಚ್ಚು ಸಾಂದ್ರತೆಯುಳ್ಳ ಅಂಶ, ನೈಸರ್ಗಿಕ ಉಷ್ಣ ನಿರೋಧಕ, ಕಡಿಮೆ ವೆಚ್ಚದ್ದು. ಅದು ಆನ್‌ಲೈನ್‌ನಲ್ಲಿ ಕೂಡ ಲಭ್ಯವಿದೆ https://www.kviconline.gov.in

Advertisement

Udayavani is now on Telegram. Click here to join our channel and stay updated with the latest news.

Next