Advertisement

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

04:48 PM Mar 27, 2024 | Team Udayavani |

ಮುಂಬಯಿ: ಸಟ್ಟೇರುವ ಮುನ್ನ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿರುವ ರಣಬೀರ್‌ ಕಪೂರ್‌ – ನಿತೇಶ್‌ ತಿವಾರಿ ʼರಾಮಾಯಣʼ ಸಿನಿಮಾದ ಬಗ್ಗೆ ದಿನಕ್ಕೊಂದರಂತೆ ನಾನಾ ಸುದ್ದಿಗಳು ಹರಿದಾಡುತ್ತಿದೆ.

Advertisement

ಪಾತ್ರವರ್ಗದ ಆಯ್ಕೆಯ ವಿಚಾರದಲ್ಲಿ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ದಕ್ಷಿಣ ಸೇರಿದಂತೆ ಬಿಟೌನ್‌ ಸ್ಟಾರ್‌ ನಟರು ಕೂಡ ಸಿನಿಮಾದ ಭಾಗವಾಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ.

ಸಿನಿಮಾದಲ್ಲಿ ರಣ್ಬೀರ್‌ ಕಪೂರ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ಮಾಡಲಿದ್ದಾರೆ. ಇನ್ನು ಸಿನಿಮಾದ ಮತ್ತೊಂದು ಪ್ರಧಾನ ಪಾತ್ರವಾದ ʼರಾವಣʼ ನಾಗಿ ನಟ ಯಶ್‌ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Tollywood: ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾದ್ರಾ ಸಿದ್ಧಾರ್ಥ್ – ಅದಿತಿ ರಾವ್ ಹೈದರಿ?

ಇನ್ನು ಸಿನಿಮಾದಲ್ಲಿ ಸನ್ನಿ ಡಿಯೋಲ್ ʼಹನುಮಾನ್ʼ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಲಾರಾ ದತ್ತಾ ಅವರು ʼಕೈಕೇಯಿʼ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಸಿನಿಮಾದಲ್ಲಿನ ಮತ್ತೊಂದು ಪಾತ್ರಕ್ಕಾಗಿ ಕಿರುತೆರೆ ಹಾಗೂ ಬಾಲಿವುಡ್‌ ನ ನಟಿರೊಬ್ಬರ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ.

Advertisement

ʼರಾವಣʼ ನ ಪತ್ನಿಯ ಪಾತ್ರಕ್ಕಾಗಿ ಕಿರುತೆರೆಯಲ್ಲಿ ಮಿಂಚಿರುವ ಸಾಕ್ಷಿ ತನ್ವರ್ ಅವರು ಆಯ್ಕೆಯಾಗಿದ್ದಾರೆ ಎಂದು ʼಫಿಲ್ಮಿ ಬೀಟ್‌ʼ ವರದಿ ಮಾಡಿದೆ. ʼಮಂಡೋದರಿʼ ಪಾತ್ರದಲ್ಲಿ ಯಶ್‌ ಜೊತೆ ಸಾಕ್ಷಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಾಕ್ಷಿ ಅವರು ಪಾತ್ರದ ತಯಾರಿಗಾಗಿ ಸ್ಕ್ರಿಪ್ಟ್-ರೀಡಿಂಗ್ ಸೆಷನ್‌ಗಳಿಗೆ ಹೋಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಏಪ್ರಿಲ್‌ ಕೊನೆಯಲ್ಲಿ ಸಿನಿಮಾ ಸಟ್ಟೇರುವ ಸಾಧ್ಯತೆಯಿದೆ. ಆದರೆ ಮತ್ತೊಂದೆಡೆ ಸಿನಿಮಾ ಮುಂದಿನ ವರ್ಷ ಸಟ್ಟೇರಬಹುದೆನ್ನುವ ಹೊಸ ವಿಚಾರವೂ ಸಿನಿವಲಯದಲ್ಲಿ ಹರಿದಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next