Advertisement

USISPF ನೀತಾ ಅಂಬಾನಿಗೆ ಜಾಗತಿಕ ನಾಯಕತ್ವ ಪ್ರಶಸ್ತಿಯ ಗರಿ

03:43 PM Nov 01, 2023 | |

ನವದೆಹಲಿ: ರಿಲಯನ್ಸ್‌ ಫೌಂಡೇಷನ್‌ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಅಮೆರಿಕ-ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ (ಯುಎಸ್‌-ಇಂಡಿಯಾ ಸ್ಟ್ರಾಟೆಜಿಕ್‌ ಪಾಟ್ನರ್‌ಶಿಪ್‌ ಫೋರಂ) ವತಿಯಿಂದ ಅತ್ಯುನ್ನತ ಜಾಗತಿಕ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Advertisement

ಭಾರತ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಫೋರಂನ ಅಧ್ಯಕ್ಷರಾದ ಜಾನ್‌ ಚೇಂಬರ್ಸ್‌ ಅವರು ನೀತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ನೀತಾ ಅವರು ತೊಡಗಿಸಿಕೊಂಡಿದ್ದು, ಅವರ ನೇತೃತ್ವದಲ್ಲಿಯೇ ರಿಲಯನ್ಸ್‌ ಫೌಂಡೇಷನ್‌ ಶಿಕ್ಷಣ, ಕಲೆ, ಕ್ರೀಡೆ, ಆರೋಗ್ಯ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಮೂಲಕ ಕೋಟ್ಯಂತರ ಭಾರತೀಯರನ್ನು ತಲುಪಿದೆ. ವಿಶೇಷವಾಗಿ ಲಿಂಗ ಅಸಮಾನತೆ ತೊಡೆದು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವವರಲ್ಲಿ ನೀತಾ ಅವರ ಪಾತ್ರ ಬಹುಮುಖ್ಯ ಹಾಗೂ ಶ್ಲಾಘನೀಯವಾದ ಕಾರಣ ಈ ಪ್ರಶಸ್ತಿ ಕೊಡಮಾಡುತ್ತಿರುವುದಾಗಿಯೂ ತಿಳಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ನೀತಾ, ಧನ್ಯವಾದ ಸಲ್ಲಿಸಿ, ತಮ್ಮ ಕಾರ್ಯಗಳ ಮೂಲಕ ಮತ್ತಷ್ಟು ಜನರನ್ನು ತಲುಪುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next