Advertisement
ಆದರೆ ಬೆಳವಣಿಗೆ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ ಹಲವಾರು ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳ ನಿರ್ಧಾರ ಕೈಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯನ್ನಿಟ್ಟುಕೊಂಡಿವೆ.
ಮಾರುತಿ ಸುಜುಕಿ ಬೆಲೆ ಹೆಚ್ಚಳ ಯೋಜನೆ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಮತ್ತಷ್ಟು ಕಾರು ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿವೆ. ನಿಸಾನ್ ಮೋಟಾರ್‌ನ ದೇಶಿಯ ಕಾರುಗಳ ಬೆಲೆಯಲ್ಲಿ ಜನವರಿಯಿಂದ ಶೇ.5ರಷ್ಟು ಅಧಿಕವಾಗಲಿದ್ದು, ಉತ್ಪಾದನೆಯ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದಾಗಿ ನಿಸಾನ್ ಹೇಳಿದೆ.
Related Articles
ಇದರ ಜತೆಯಲ್ಲಿ ಟಾಟಾ ಮೋಟಾರ್ಸ್ ಹಾಗೂ ಹ್ಯುಂಡೈ ಕಾರುಗಳ ದರದಲ್ಲಿಯೂ ಏರಿಕೆಯಾಗಲಿದ್ದು, ನಷ್ಟವನ್ನು ಸರಿದೂಗಿಸುವ ಹಾಗೂ ಉತ್ಪಾದನಾ ವೆಚ್ಚವನ್ನು ಸಮದೂಗಿಸಲು ಈ ಎಲ್ಲಾ ಕಾರು ಉತ್ಪಾದಕ ಕಂಪನಿಗಳು ಬೆಲೆ ಏರಿಕೆಯ ನೀತಿಯನ್ನು ಅನುಸರಿಸುತ್ತಿವೆ.
Advertisement