ಹಳೆಯ ಯಶಸ್ವಿ ಚಿತ್ರಗಳ ಟೈಟಲ್‌ಗಳು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಮರುಬಳಕೆಯಾಗುತ್ತಿವೆ. ಹಾಗಂತ ಹಳೆಯ ಸಿನಿಮಾಳಲ್ಲಿದ್ದ ಗಟ್ಟಿತನ ಮರುಕಳಿಸುತ್ತಿದೆಯಾ ಎಂದರೆ ಅದಕ್ಕೆ ಉತ್ತರವಿಲ್ಲ.
ಈಗ ಮತ್ತೂಂದು ಯಶಸ್ವಿ ಕನ್ನಡ ಚಿತ್ರದ ಟೈಟಲ್ ಇಟ್ಟುಕೊಂಡು ಹೊಸಬರ ತಂಡ ಸಿನಿಮಾ ಮಾಡುತ್ತಿದೆ. ಅದು “ನಿಷ್ಕರ್ಷ’. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ವಿಷ್ಣುವರ್ಧನ್ ನಟನೆಯಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಥ್ರಿಲ್ಲರ್ ಸಿನಿಮಾವಾಗಿ ಪ್ರೇಕ್ಷಕರ ಮನಸು ಗೆದ್ದಿತ್ತು. ಈಗ ಅದೇ ಟೈಟಲ್‌ನಡಿ ಹೊಸಬರು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊಸಬರ “ನಿಷ್ಕರ್ಷ’ ಚಿತ್ರ ಮುಹೂರ್ತ ಕಂಡಿತು. ವಿಜಯ್ ಈ ಸಿನಿಮಾದ ನಿರ್ದೇಶಕರು.
ವಿಜಯ್ ನಿರ್ದೇಶನದ ಮೊದಲ ಚಿತ್ರ “ಉಸಿರೇ ಉಸಿರೇ’ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅಷ್ಟರಲ್ಲೇ ವಿಜಯ್ “ನಿಷ್ಕರ್ಷ’ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅನಿಕೇತ್ ನಾಯಕರಾಗಿ ಲಾಂಚ್ ಆಗುತ್ತಿದ್ದಾರೆ.ಚಿತ್ರವನ್ನು ಇವರ ತಂದೆ ಮಹೇಶ್ ನಿರ್ಮಿಸುತ್ತಿದ್ದಾರೆ.ಚಿತ್ರದ ಬಗ್ಗೆ ಮಾತನಾಡುವ ವಿಜಯ್, “ನಿರ್ಮಾಪಕರು ಅವರ ಮಗನ ಲಾಂಚ್ ಮಾಡೋಕೆ ಕಥೆ ಹುಡುಕುತ್ತಾ ಇದ್ದರು. ಆ ಸಮಯದಲ್ಲಿ ನಾನು ಈ ಕಥೆ ಹೇಳಿದೆ. ಅವರಿಗೆ ಇಷ್ಟವಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕಥೆ ತುಂಬಾ ಭಿನ್ನವಾಗಿದೆ. ಈ ಚಿತ್ರದ ಪ್ರಮುಖ ಹೈಲೈಟ್ ಎಂದರೆ ಚಿತ್ರಕಥೆ ಎರಡು ಟ್ರ್ಯಾಕ್‌ನಲ್ಲಿ ಸಾಗುತ್ತದೆ ಹಾಗೂ ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಇಲ್ಲ. ಹಾಗಂತ ಚಿತ್ರ ಹೇಗೆ ಮುಗಿಯುತ್ತದೆ ಎಂಬ ಕುತೂಹಲ ಸಹಜ. ಅದಕ್ಕೆ ಸಿನಿಮಾದಲ್ಲಿ ಉತ್ತರವಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ವಿಜಯ್. ಎಲ್ಲಾ ಓಕೆ. ಚಿತ್ರದ ಕಥೆಯೇನು, ಯಾವ ವಿಚಾರವಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆಂದು ನೀವು ಕೇಳಬಹುದು.
ಎರಡುವರ್ಷಗಳಹಿಂದೆ ನಡೆದ ನೈಜಘಟನೆಯೊಂದನ್ನಿಟ್ಟುಕೊಂಡ ನಿರ್ದೇಶಕರು ಸಿನಿಮಾಮಾಡುತ್ತಿದ್ದಾರಂತೆ. ಅಷ್ಟಕ್ಕೂಏನುಆ ನೈಜಘಟನೆಎಂದರೆಅದನ್ನು ಹೇಳಲು ನಿರ್ದೇಶಕರುತಯಾರಿಲ್ಲ. ಸಿನಿಮಾ ನೋಡಿಹೊರಬಂದ ನಂತರಹೆಣ್ಣು ಮಕ್ಕಳನ್ನು
ಕೆಟ್ಟ ದೃಷ್ಟಿಯಿಂದ ನೋಡುವ ಮುನ್ನ ತುಂಬಾ ಆಲೋಚಿಸಬೇಕಾಗುತ್ತದೆ ಎಂದಷ್ಟೇ ಹೇಳುತ್ತಾರೆ ನಿರ್ದೇಶಕರು. ಮುಂದಿನ ಕಥೆಯನ್ನು ನೀವು ಊಹಿಸಿಕೊಳ್ಳಬಹುದು. ನಿರ್ಮಾಪಕ ಮಹೇಶ್ ಅವರು ಕಥೆ ಇಷ್ಟವಾಗಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿಕೊಂಡರು. ಚಿತ್ರದಲ್ಲಿ ನಟಿಸುತ್ತಿರುವಅನಿಕೇತ್ ಅವರ ಬಾಡಿಲಾಂಗ್ವೇಜ್ ಈ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆಯಂತೆ. ಅದು ಬಿಟ್ಟರೆ ಪಾತ್ರದ ಬಗ್ಗೆ ಹೆಚ್ಚೇನು ಹೇಳಿಕೊಳ್ಳಲಿಲ್ಲ. ದಿವ್ಯಾ ಉರುಡುಗ ಈ ಚಿತ್ರದ ನಾಯಕಿ.
“ಹುಲಿರಾಯ’ ಚಿತ್ರ ನೋಡಿ ಅವರಿಗೆ ಈ ಅವಕಾಶ ಸಿಕ್ಕಿತಂತೆ. ಇಲ್ಲಿ ಅವರು ಬಜಾರಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರಕ್ಕೆ ವಿವೇಕ್ ಸಂಗೀತ, ಸರವಣ ಛಾಯಾಗ್ರಹಣವಿದೆ.