Advertisement

ಜ್ವೆರೇವ್‌ ಸೆಮಿಫೈನಲಿಗೆ ಹಿಂದೆ ಸರಿದ ಆ್ಯಂಡಿ ಮರ್ರೆ

06:10 AM Aug 05, 2018 | Team Udayavani |

ವಾಷಿಂಗ್ಟನ್‌: ಹಾಲಿ ಚಾಂಪಿಯನ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಾಷಿಂಗ್ಟನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಬ್ರಿಟನ್ನಿ ಆ್ಯಂಡಿ ಮರ್ರೆ ಮತ್ತೆ ಗಾಯಾಳಾಗಿ ಕೂಟದಿಂದ ಹಿಂದೆ ಸರಿದಿದ್ದಾರೆ.

Advertisement

3ನೇ ಶ್ರೇಯಾಂಕದ ಜ್ವೆರೇವ್‌ ಈಗ ಪ್ರಸಕ್ತ ಋತುವಿನ 5ನೇ ಫೈನಲ್‌ ಹಾಗೂ 3ನೇ ಪ್ರಶಸ್ತಿಯ ಗುರಿ ಹಾಕಿಕೊಂಡಿದ್ದಾರೆ. ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನಿನ ಕೀ ನಿಶಿಕೊರಿ ವಿರುದ್ಧ 3-6, 6-1, 6-4 ಅಂತರದ ಜಯ ಸಾಧಿಸಿದರು. ನಿಶಿಕೊರಿ ಇಲ್ಲಿ 3 ವರ್ಷಗಳ ಹಿಂದೆ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

ಜ್ವೆರೇವ್‌ ಅವರ ಎದುರಾಳಿ ಗ್ರೀಸ್‌ನ 19ರ ಹರೆಯದ ಸ್ಟೆಫಾನಸ್‌ ಟಿಟ್ಸೆಪಾಸ್‌. ಅವರು ಬೆಲ್ಜಿಯಂನ ಡೇವಿಡ್‌ ಗೊಫಿನ್‌ಗೆ 6-3, 6-4 ಅಂತರದ ಸೋಲುಣಿಸಿದರು.

ಆ್ಯಂಡಿ ಮರ್ರೆ ಹಿಂದೆ ಸರಿದುದರಿಂದ ಆಸ್ಟ್ರೇಲಿಯದ 19ರ ಹರೆಯದ ಅಲೆಕ್ಸ್‌ ಡಿ ಮಿನೌರ್‌ ಸೆಮಿಫೈನಲ್‌ ಕಾಣುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next