ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಪುರುಷರ 71 ಕೇಜಿ ವಿಭಾಗದ ವಾಲ್ಟರ್‌ವೈಟ್ ಕ್ವಾರ್ಟರ್ ಫೈನಲ್ ನಲ್ಲಿ ಸ್ಪರ್ಧಿಸಿದ ಭಾರತದ ನಿಶಾಂತ್ ದೇವ್ (Nishant Dev) ಸೋಲನುಭವಿಸಿದ್ದಾರೆ.
ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವರು ಮೆಕ್ಸಿಕೋದ ಮಾರ್ಕೋ ವರ್ಡೆ ವಿರುದ್ಧ 4-1 ಅಂತರದಿಂದ ಪರಾಭವಗೊಂಡರು. ಈ ಪಂದ್ಯ ಗೆದ್ದು ಸೆಮಿಫೈನಲ್ ಗೇರಿದ್ದರೆ ನಿಶಾಂತ್‌ಗೆ ಕಂಚಿನ ಪದಕವಂತೂ ಖಾತ್ರಿಯಾಗುತ್ತಿತ್ತು. ಆದರೆ, ಆ ಅವಕಾಶವನ್ನು ನಿಶಾಂತ್ ಕೈ ಚೆಲ್ಲಿದ್ದಾರೆ.
ಈ ಪಂದ್ಯದಲ್ಲಿ ನಿಶಾಂತ್ ದೇವ್ ಒಂದು ವೇಳೆ ಗೆದ್ದಿದ್ದರೆ, ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಗೆದ್ದು ಪದಕ ಜಯಿಸಿದ ಭಾರತದ ನಾಲ್ಕನೇ ಬಾಕ್ಸರ್ ಆಗಿ ಅವರು ಗುರುತಿಸಿಕೊಳ್ಳುತ್ತಿದ್ದರು. ಇದಕ್ಕೂ ಮುನ್ನ ವಿಜೇಂದರ್ ಸಿಂಗ್, ಮೇರಿ ಕೋಮ್ ಮತ್ತು ಲವ್ಲೀನಾ ಬೋರ್ಗೋಹೇನ್ ಈ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ ಪುರುಷರ ವಿಭಾಗದಲ್ಲಿ ಭಾರತ ಪರ ಒಲಿಂಪಿಕ್ಸ್ ಪದಕ ಗೆದ್ದಿದ್ದು ವಿಜೇಂದರ್ ಸಿಂಗ್ ಮಾತ್ರ, ಅವರು 2008 ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಈ ಸಾಧನೆ ಮಾಡಿದ್ದರು.