Advertisement

Nischith Korodi; ‘ಸಪ್ಲೈಯರ್‌ ಶಂಕರ’ನ ಟೀಸರ್ ಬಂತು

05:24 PM Oct 22, 2023 | Team Udayavani |

ನಿಶ್ಚಿತ್‌ ಕರೋಡಿ ನಾಯಕನಾಗಿ ನಟಿಸಿರುವ ಸಪ್ಲೈಯರ್‌ ಶಂಕರ ಚಿತ್ರದ ಟೀಸರ್‌ ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕರಾದ ಚಂದ್ರಶೇಖರ್‌ ಹಾಗೂ ನಾಗೇಂದ್ರ ಸಿಂಗ್‌ ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿದರು. ರಂಜಿತ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.

Advertisement

“ನಿರ್ದೇಶಕ ರಂಜಿತ್‌ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದು ನಿರ್ಮಾಪಕರಾದ ಚಂದ್ರಶೇಖರ್‌ ಹಾಗೂ ನಾಗೇಂದ್ರ ಸಿಂಗ್‌ ತಿಳಿಸಿದರು.

ಇದು ಬಾರ್‌ ಸಪ್ಲೈಯರ್‌ ಒಬ್ಬನ ಕಥೆ. ನಾನೇ ಕಥೆ ಬರೆದಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್‌ ಕರೋಡಿ ಬಹಳ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್‌ ಹಾಗೂ ನಾಗೇಂದ್ರ ಸಿಂಗ್‌. ಈ ಚಿತ್ರದಲ್ಲಿ ಹೆಚ್ಚಾಗಿ ಹೊಸತಂಡ ಕಾರ್ಯ ನಿರ್ವಹಿಸಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ವಿವರ ನೀಡಿದರು ನಿರ್ದೇಶಕ ರಂಜಿತ್‌.

“ನಾನು ಈ ಹಿಂದೆ ಗಂಟು ಮೂಟೆ ಹಾಗೂ ಟಾಮ್‌ ಅಂಡ್‌ ಜೆರ್ರಿ ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ. ಬಾರ್‌ ಸಪ್ಲೈಯರ್‌ ಪಾತ್ರ ನನ್ನದು. ಹಾಗಂತ ಈ ಚಿತ್ರದಲ್ಲಿ ಬರೀ ಸಪ್ಲೈಯರ್‌ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್‌, ಲವ್‌, ಥ್ರಿಲ್ಲರ್‌ ಎಲ್ಲವೂ ಇದೆ. ನಿರ್ದೇಶಕ ರಂಜಿತ್‌ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು ನಾಯಕ ನಿಶ್ಚಿತ್‌ ಕರೋಡಿ.

ಶಿಕ್ಷಕಿ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ದೀಪಿಕಾ ಆರಾಧ್ಯ ಹೇಳಿದರು. ಆರ್‌. ಬಿ ಭರತ್‌ ಸಂಗೀತ, ಸತೀಶ್‌ ಕುಮಾರ್‌ ಛಾಯಾಗ್ರಹಣ, ಸತೀಶ್‌ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next