Advertisement
ಮೈಸೂರು ಕನ್ನಡ ಚಳವಳಿಗಾರರ ಸಂಘದಿಂದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಕನ್ನಡ ನಾಡಿನಲ್ಲಿ ಕನ್ನಡ ಅಗತ್ಯವಿಲ್ಲ ಎಂಬ ಭಾವನೆ ಮೂಡಿದ್ದು, ಇದಕ್ಕೆ ಪೂರಕವಾಗಿ ಕನ್ನಡದಲ್ಲಿ ಸಂವಹನ ನಡೆಸದೆ, ಅವರ ಭಾಷೆಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಕನ್ನಡಿಗರಿಗೆ ಕನ್ನಡದ ಬಗ್ಗೆ ಒಲವಿರಬೇಕು, ನಿರಾಭಿಮಾನಿ ಕನ್ನಡಿಗರ ಅನ್ಯಬಾಷಿಕರು ಈ ನಾಡಿನಲ್ಲಿ ವ್ಯಾಪಾರಿಗಳಿಗೆ ಕನ್ನಡ ಕಲಿಸಿದಾಗ ಮಾತ್ರ ನಮ್ಮ ನಾಡಲ್ಲಿ, ನಾಡ ರಾಜಧಾನಿಯಲ್ಲಿ ಕನ್ನಡ ಉಳಿಯಲಿದೆ ಎಂದರು.
ನನ್ನನ್ನೇಕೇ ಆಹ್ವಾನಿಸಲಿಲ್ಲ?: ಇತ್ತೀಚೆಗೆ ಮೈಸೂರಿನಲ್ಲಿ ನಡೆದ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಿಗೆ ನನ್ನನ್ನೇಕೆ ಆಹ್ವಾನಿಸಲಿಲ್ಲ. ಹೀಗೆಂದು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರನ್ನು ಮಾಜಿ ಸಂಸದ ಎಚ್. ವಿಶ್ವನಾಥ್ ಪ್ರಶ್ನಿಸಿದರು. ತಾವು ಈವರೆಗೂ 7 ಕೃತಿಗಳನ್ನು ರಚಿಸಿದ್ದು, ಸಾಹಿತಿಗಳ ನಡುವಿನಲ್ಲಿ ಗುರುತಿಸಿಕೊಂಡಿದ್ದೇನೆ.
ಆದರೆ ಮೈಸೂರಿನಲ್ಲೇ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಯಾರ ಭಯದಿಂದ ಆಹ್ವಾನಿಸಲಿಲ್ಲ. ಆದರೆ ನೀವು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ತಾನು ಬಾರದೇ ಕುಳಿತಿಲ್ಲ. ಕನ್ನಡದ ಕುರಿತ ಹೋರಾಟ, ವಿಚಾರ ಸಂಕಿರಣ ಯಾವುದೇ ಸ್ಥಳದಲ್ಲಿ ನಡೆದರೂ ಹೋಗುವ ಜತೆಗೆ ಸಮ್ಮೇಳನದ ಗೋಷ್ಠಿಗಳನ್ನೂ ಕೇಳಿದ್ದೇನೆಂದರು.
ಇದೇ ವೇಳೆ ಸಾಹಿತಿಗಳಾದ ಪೊ›.ಕೆ.ಸ್.ನಿಸಾರ್‌ಅಹಮದ್, ಪೊ›.ಸಿ.ಪಿ.ಕೃಷ್ಣಕುಮಾರ್‌ರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಉದ್ಘಾಟಿಸಿದರು. ಮಾಜಿ ಸಂಸದ ಎಚ್.ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸಮಾಜ ಸೇವಕ ರಘುರಾಂ ವಾಜಪೇಯಿ, ಬಿ.ಎ.ಶಿವಶಂಕರ್ ಇದ್ದರು.ಹೋರಾಟಗಾರರಿಂದ ಕನ್ನಡ ಉಳಿವು: ಕನ್ನಡ ಚಳವಳಿಗಾರರನ್ನು ದಗಲಾಜಿಗಳು, ಧಗೆಕೋರರು, ವಸೂಲಿಕೋರರು ಎಂದೆಲ್ಲಾ ವ್ಯಾಖ್ಯಾನಿಸುತ್ತಾರೆ. ಆದರೆ ಕನ್ನಡವನ್ನು ಜ್ವಲಂತವಾಗಿ ಕಾಪಾಡಿಕೊಂಡು ಬಂದಿರುವರು ನಮ್ಮ ಕನ್ನಡ ಹೊರಾಟಗಾರರು. ನಾವು ಸಾಹಿತಿಗಳು ಬರೆಯುತ್ತವೆ. ಆದರೆ ಇಂದು ಕನ್ನಡ ಉಳಿವಿಗೆ ಬರವಣಿಗೆಗಿಂತ ಚಳವಳಿ ಹೋರಾಟವೇ ಮುಖ್ಯವಾಗಲಿದೆ ಎಂದು ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಹೇಳಿದರು.