Advertisement
ಮಂಗಳವಾರ ಮಂಡನೆಯಾಗಲಿರುವ ಬಜೆಟ್ ಬಗ್ಗೆ ಜನಸಾಮಾನ್ಯನಿಂದ ಹಿಡಿದು ಉದ್ಯಮಪತಿಗಳವರೆಗೂ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಪ್ರಧಾನಿ ಮೋದಿ ಅವರು ಈ ಬಜೆಟ್ ತಮ್ಮ ಸರ್ಕಾರದ ಮುಂದಿನ 5 ವರ್ಷಗಳ ದಿಕ್ಸೂಚಿಯಾಗಲಿದೆ. ಅಲ್ಲದೇ, 2047ರ ವಿಕಸಿತ ಭಾರತದ ಗುರಿಗೆ ಅಡಿಪಾಯ ಒದಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ನಿರ್ಮಲಾ ಸೀತಾರಾಮನ್ ಅವರ ಸತತ 7ನೇ ಬಜೆಟ್ ಮಂಡನೆ ಇದಾಗಿದೆ.
Related Articles
Advertisement
ನಂತರದ ಸ್ಥಾನದಲ್ಲಿ ಪಿ.ಚಿದಂಬರಂ 9, ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ, ಯಶವಂತರಾವ್ ಚವಾಣ್, ಸಿ.ಡಿ.ದೇಶಮುಖ್ 7 ಬಾರಿ ಬಜೆಟ್ ಮಂಡಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಮಾಜಿ ವಿತ್ತ ಸಚಿವ ಟಿ.ಟಿ. ಕೃಷ್ಣಮಾಚಾರಿ 6 ಬಾರಿ ಬಜೆಟ್ ಮಂಡಿಸಿದ್ದರು.
ಲೋಕಸಭೆಯಲ್ಲಿ ಬಜೆಟ್ ಚರ್ಚೆಗೆ 20 ಗಂಟೆ ಮೀಸಲು:ಮಂಗಳವಾರ ಮಂಡನೆಯಾಗಲಿರುವ ಬಜೆಟ್ ಚರ್ಚೆಗೆ 20 ಗಂಟೆ ಮೀಸಲಿಡಲು ಲೋಕಸಭೆ ಕಲಾಪ ವ್ಯವಹಾರ ಸಮಿತಿ ನಿರ್ಧರಿಸಿದೆ. ಈ ವೇಳೆ, ರೈಲ್ವೆ, ಶಿಕ್ಷಣ, ಆರೋಗ್ಯ, ಎಂಎಸ್‌ಎಂಇ(ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ), ಆಹಾರ ಸಂಸ್ಕರಣೆ ಇತ್ಯಾದಿ ವಲಯಗಳ ಕುರಿತು ಚರ್ಚಿಸಲಾಗುತ್ತದೆ. ನಿರೀಕ್ಷೆಗಳೇನು?
– ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಹೆಚ್ಚಳ ಸಾಧ್ಯತೆ
– ಗೃಹ ಸಾಲದ ಬಡ್ಡಿ ತೆರಿಗೆ ವಿನಾಯ್ತಿ 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ
– ವಿತ್ತೀಯ ಕೊರತೆಯನ್ನು ಶೇ.5ಕ್ಕೆ ಇಳಿಸುವ ನಿರೀಕ್ಷೆ. ಈಗ ಅದು ಶೇ.5.1ರಷ್ಟಿದೆ.
– ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೆರಿಗೆ ವಿನಾಯ್ತಿ
– ಅಕ್ಕಿ, ಗೋಧಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮೇಲಿನ ನಿರ್ಬಂಧ ತೆರವು
– ವಿದ್ಯುತ್‌ಚಾಲಿತ ವಾಹನಗಳ ಉದ್ಯಮದಿಂದ ಜಿಎಸ್‌ಟಿ ಸುಧಾರಣೆ ನಿರೀಕ್ಷೆ
– ಡೆವಲಪರ್ಸ್‌ಗೆ ನೆರವಾಗುವ ನೀತಿ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
– ಉತ್ಪಾದನಾ ವಲಯಕ್ಕೆ ಸರ್ಕಾರದ ನೀಡುವ ಉತ್ತೇಜನಾ ಕ್ರಮಗಳು ಮುಂದುವರಿಕೆ
– ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೇಗಾ ವೇತನ ಹೆಚ್ಚಳ ಸಾಧ್ಯತೆ ವಿಕಸಿತ ಭಾರತಕ್ಕೆ ಅಡಿಪಾಯ ಅಮೃತ ಕಾಲದ ಈ ಬಜೆಟ್ ಮಹತ್ವದ್ದಾಗಿದ್ದು, ಮುಂದಿನ 5 ವರ್ಷಗಳ ನಮ್ಮ ಸರ್ಕಾರದ ದಿಕ್ಸೂಚಿಯಾಗಿರಲಿದೆ. ಜತೆಗೆ, ನಮ್ಮ ಸರ್ಕಾರದ ವಿಕಸಿತ ಭಾರತ ಕನಸಿಗೆ ಗಟ್ಟಿಯಾದ ಅಡಿಪಾಯ ಹಾಕಲಿದೆ.
– ನರೇಂದ್ರ ಮೋದಿ, ಪ್ರಧಾನಿ