Advertisement
ಈ ಮೂಲಕ ಆರ್ಥಿಕ ಕುಸಿತಕ್ಕೆ ಸಂಬಂಧಿಸಿ ಮನಮೋಹನ ಸಿಂಗ್ ಮತ್ತು ನಿರ್ಮಲಾ ಸೀತಾರಾಮನ್ ಮಧ್ಯೆ ನಡೆಯುತ್ತಿರುವ ಮಾತಿನ ಕದನ ಮುಂದುವರಿದಂತಾಗಿದೆ. ಐದು ವರ್ಷಗಳವರೆಗೆ ಆಡಳಿತ ನಡೆಸಿದ ನಂತರವೂ, ಎಲ್ಲ ಆರ್ಥಿಕ ಕುಸಿತಕ್ಕೂ ಯುಪಿಎ ಸರ್ಕಾರವನ್ನು ಹೊಣೆ ಮಾಡುವುದನ್ನು ಎನ್‌ಡಿಎ ಸರ್ಕಾರ ನಿಲ್ಲಿಸಬೇಕು ಎಂದು ಸಿಂಗ್ ಗುರುವಾರ ಹೇಳಿದ್ದರು.
ಭಾರತದ ಜಿಡಿಪಿ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಫ್) ನಿರೀಕ್ಷಿಸಿದರೂ, ವಿಶ್ವದಲ್ಲೇ ಅತಿ ವೇಗವಾಗಿ ಪ್ರಗತಿ ಕಾಣುತ್ತಿರುವ ಆರ್ಥಿಕತೆ ಭಾರತದ್ದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇತ್ತೀಚಿನ ಐಎಂಎಫ್ ವಿತ್ತ ನಿರೀಕ್ಷೆಯಲ್ಲಿ ವಿಶ್ವದ ಎಲ್ಲ ಆರ್ಥಿಕತೆಗಳ ಪ್ರಗತಿ ನಿರೀಕ್ಷೆಯನ್ನೂ ಇಳಿಸಲಾಗಿದೆ. ಅದೇ ರೀತಿ ಭಾರತದ ಪ್ರಗತಿ ನಿರೀಕ್ಷೆಯನ್ನೂ ಇಳಿಸಲಾಗಿದೆ. ಆದರೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದ್ದಾರೆ.