Advertisement

ನಾಳೆಯ ಕೇಂದ್ರ ಬಜೆಟ್‌ನಲ್ಲಿ ನಮಗೇನು?

12:18 AM Jan 31, 2023 | Team Udayavani |

ಬಹುನಿರೀಕ್ಷಿತ ಕೇಂದ್ರ ಬಜೆಟನ್ನು ಫೆ. 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. ಪ್ರಸಕ್ತ ವರ್ಷ ಕರ್ನಾಟಕ ಸಹಿತ 9 ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಜತೆಗೆ ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ಇದೆ. ವೇತನದಾರರಿಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಅನುಕೂಲವಾಗಬಹುದೇ, ಗೃಹ ಸಾಲ ಪಡೆಯುವವರಿಗೇನು ಸಿಗಲಿದೆ ಎಂಬ ನಿರೀಕ್ಷೆ ಸಹಜ. ಇವೆಲ್ಲದಕ್ಕೆ ಪೂರಕವಾಗಿ ಜ. 31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.

Advertisement

ಐ.ಟಿ. ವಿನಾಯಿತಿ
6 ಲಕ್ಷ ರೂ?
ಆದಾಯ ತೆರಿಗೆ ವಿನಾಯಿತಿ 6 ಲಕ್ಷ ರೂ.ಗೆ ಏರಿಸುವ ನಿರೀಕ್ಷೆ. 2014ರಲ್ಲಿ 2.5 ಲಕ್ಷ ರೂ. ನಿಗದಿಯಾದದ್ದು ಮತ್ತೆ ಬದಲಾಗಿಲ್ಲ.

ಗೃಹ ಸಾಲಗಾರರಿಗೆ ಇದೆ ನಿರೀಕ್ಷೆ
ಮನೆ/ಅಪಾರ್ಟ್‌ಮೆಂಟ್‌ ಖರೀದಿಗಾಗಿ ಸಾಲ ಮಾಡಿದವರಿಗೆ ಸದ್ಯ 2 ಲಕ್ಷ ರೂ. ವರೆಗೆ ವಿನಾಯಿತಿ ಇದೆ. ಅದು 4 ಲಕ್ಷ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಚುನಾವಣೆಯ ಅನಿವಾರ್ಯ
ಕರ್ನಾಟಕ ಸೇರಿ 9 ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮತಗಳಿಕೆಯ ಯೋಜನೆಗಳ ಪ್ರಕಟ ಸಾಧ್ಯತೆ.

ಕೃಷಿ ತಾಂತ್ರಿಕತೆಗೆ ಒತ್ತು
ಶೇ. 50 ಮಂದಿ ಕೃಷಿಯನ್ನೇ ಉದ್ಯೋಗಕ್ಕಾಗಿ ನಂಬಿದ್ದಾರೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಲು ಆದ್ಯತೆ ನೀಡುವಂಥ ಕ್ರಮ ಸಂಭಾವ್ಯ.

Advertisement

ಸವಾಲುಗಳೇನು?
-ಶೇ. 6.4ರಷ್ಟು ಇರುವ ವಿತ್ತೀಯ ಕೊರತೆ ನಿಯಂತ್ರಿಸಲು ಕ್ರಮ
-ಸಂಭಾವ್ಯ ಆರ್ಥಿಕ ಹಿಂಜರಿತ ಎದುರಿಸಲು ವೆಚ್ಚ ಕಡಿತಕ್ಕೆ ಕ್ರಮ
-ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ
-ರಫ್ತು ಪ್ರಮಾಣ ಏರಿಸಲು ಪ್ರಯತ್ನ
-ಜನರ ಖರೀದಿ ಶಕ್ತಿ ವೃದ್ಧಿಗೆ ಇಂಬು

Advertisement

Udayavani is now on Telegram. Click here to join our channel and stay updated with the latest news.

Next