Advertisement

ದೇಶದ ಆರ್ಥಿಕಾಭಿವೃದ್ಧಿಗೆ ಕೇಂದ್ರದಿಂದ ಮಹತ್ವದ ಕ್ರಮ; ವಿತ್ತ ಸಚಿವೆ ಸೀತಾರಾಮನ್ ಘೋಷಣೆ

10:08 AM Sep 15, 2019 | Nagendra Trasi |

ನವದೆಹಲಿ:ದೇಶದ ಆರ್ಥಿಕಾಭಿವೃದ್ಧಿ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಮಹತ್ವದ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Advertisement

ದೇಶದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡ ನಿರ್ಧಾರಗಳ ಮುಖ್ಯಾಂಶ ಇಲ್ಲಿದೆ…

*ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಸ್ತುತ ದೇಶದ ಹಣದುಬ್ಬರ ಶೇ.4ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಬ್ಯಾಂಕ್ ಗಳು ನೀಡುತ್ತಿರುವ ಸಾಲ ಪ್ರಮಾಣದ ಹೆಚ್ಚಳ ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳ ಅಧ್ಯಕ್ಷರ ಜತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

*ಈಗಾಗಲೇ ಠೇವಣಿ ಮತ್ತು ಗೃಹಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸಲಾಗಿದೆ. ರಫ್ತು ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.

*ಭಾರತದಿಂದ ರಫ್ತು ಮಾಡುವ ಉತ್ಪಾದನೆಗಳ ಮೇಲಿನ ತೆರಿಗೆ ಅಥವಾ ಸುಂಕವನ್ನು ಇಳಿಸಲಾಗುವುದು.

Advertisement

*ತೆರಿಗೆ ಸಂಬಂಧಿಸಿದ ಇ-ರಿಫಂಡ್ ಸೆಪ್ಟೆಂಬರ್ ಅಂತ್ಯದೊಳಗೆ ಆರಂಭ.

*ಜವಳಿ ಉದ್ಯಮದ ಭಾರತದ ಹೆಚ್ಚುವರಿ ಮಾರಾಟದ ರಫ್ತು ಯೋಜನೆ(ಎಂಇಐಎಸ್) ಡಿಸೆಂಬರ್ 31ರವರೆಗೆ ಮುಂದುವರಿಯಲಿದೆ.

*ರಫ್ತು ಉತ್ಪಾದನೆ ಮೇಲಿನ ತೆರಿಗೆ ಅಥವಾ ಸುಂಕ ಕಡಿತಗೊಳಿಸುವ ಮೂಲಕ 50 ಸಾವಿರ ಕೋಟಿ ಆದಾಯ ಖೋತಾ ಆಗಲಿದೆ.

*ದೇಶದ ಆರ್ಥಿಕ ಚೇತರಿಕಾಗಿ ಸರಣಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕಾಭಿವೃದ್ಧಿಗೆ ಬಲ ನೀಡಲಾಗುವುದು.

*ಪಿಸಿಜಿಎಸ್(ಭಾಗಶಃ ಸಾಲ ನೀಡುವಿಕೆ ಸ್ಕೀಮ್) ಈಗಾಗಲೇ ಜಾರಿಗೊಂಡಿದೆ.

*ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ದೊಡ್ಡ ನಿರಾಳತೆ ಎಂಬಂತೆ, ಸಣ್ಣ ಅಪರಾಧಗಳಿಗೆ ದೊಡ್ಡ ಪ್ರಮಾಣದ ಶಿಕ್ಷೆ ಇಲ್ಲ.

*ಒಂದು ವೇಳೆ ಆದಾಯ ತೆರಿಗೆಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಅಪರಾಧಗಳನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

*ಜಿಎಸ್ ಟಿಗೆ ಸಂಬಂಧಿಸಿದ ತೆರಿಗೆ ಪಾವತಿಯ ರಿಫಂಡ್ ಮಾಹಿತಿ ಇನ್ಮುಂದೆ ಶೀಘ್ರವೇ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next