Advertisement

3 ತಿಂಗಳ ಕಾಲ ಕೋವಿಡ್ 19 ಎಫೆಕ್ಟ್? ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ, ಏನಿದು

10:46 AM Mar 27, 2020 | Nagendra Trasi |

ನವದೆಹಲಿ: ಕೋವಿಡ್ 19 ಮಾರಣಾಂತಿಕ ವೈರಸ್ ನಿಂದಾಗಿ ದಿನಗೂಲಿ ನೌಕರರಿಂದ ಹಿಡಿದು ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ದೇಶದ ಬಡವರಿಗಾಗಿ 1,70,000 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿದ್ದಾರೆ.

Advertisement

ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆಗೆ 1,70, 000 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ.ಮುಂದಿನ ಮೂರು ತಿಂಗಳ ಕಾಲ 5 ಕೆಜಿ ಅಕ್ಕಿ ಅಥವಾ ಗೋಧಿ, ಒಂದು ಕೇಜಿ ಬೇಳೆಯನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಲಕ್ಷ

ಬಡವರಿಗಾಗಿ ಈ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಇದು ವಲಸೆ ಕಾರ್ಮಿಕರಿಗೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೇಂದ್ರ ಪ್ಯಾಕೇಜ್ ಜಾರಿಗೊಳಿಸಿದೆ. ಯಾರೊಬ್ಬರೂ ದೇಶದಲ್ಲಿ ಹಸಿವಿನಿಂದ ಇರಬಾರದು. ಈ ಪ್ಯಾಕೇಜ್ ಒಟ್ಟು 1.7 ಲಕ್ಷ ಕೋಟಿ ರೂಪಾಯಿಯದ್ದಾಗಿದೆ ಎಂದು ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಈ ಪ್ಯಾಕೇಜ್ ಆಹಾರ ಭದ್ರತೆ ಮತ್ತು ನೇರ ನಗದು ವರ್ಗಾವಣೆ ಲಾಭ ಹೊಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಬಡ ಕುಟುಂಬಕ್ಕೆ ಜನ್ ಧನ್ ಖಾತೆ ಮೂಲಕ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು. ಮೂರು ತಿಂಗಳ ಕಾಲ ಪ್ರತಿಯೊಬ್ಬ ಆರೋಗ್ಯ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಮೊತ್ತದ ವಿಮೆಯನ್ನು ಸೀತಾರಾಮನ್ ಘೋಷಿಸಿದ್ದಾರೆ.

ಪ್ಯಾಕೇಜ್ ಯಾರಿಗೆ ಎಷ್ಟು:
*ಏಪ್ರಿಲ್ ಮೊದಲ ವಾರದಲ್ಲಿ ರೈತರ ಖಾತೆಗೆ 2 ಸಾವಿರ ರೂಪಾಯಿ ನಗದು ಹಣ ವರ್ಗಾವಣೆ, ಇದರಿಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 8.69 ಕೋಟಿ ರೈತರು ಲಾಭ ಪಡೆಯಲಿದ್ದಾರೆ.

Advertisement

*ಮನ್ರೇಗಾ ಯೋಜನೆಯಡಿಯ ಕೂಲಿಯನ್ನು 180 ರೂಪಾಯಿಯಿಂದ 200 ರೂ.ಗೆ ಏರಿಕೆ ಮಾಡಿದ್ದು, ಇದರಿಂದ 5 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ 2ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ.

*20 ಕೋಟಿ ಮಹಿಳೆಯರು ಜನ್ ಧನ್ ಖಾತೆ ಹೊಂದಿದ್ದು ಮುಂದಿನ ಮೂರು ತಿಂಗಳ ಕಾಲ ತಿಂಗಳಿಗೆ 500 ರೂಪಾಯಿ ಹಣ ವರ್ಗಾವಣೆಯಾಗಲಿದೆ.

*ದೇಶದ ಸುಮಾರು 80 ಕೋಟಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳ ಕಾಲ 5 ಕೆಜಿ ಗೋಧಿ ಅಥವಾ ಅಕ್ಕಿ ವಿತರಣೆ

*ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 1.70 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ನಡಿ ವಲಸೆ ಮತ್ತು ದಿನಗೂಲಿ ನೌಕರರಿಗೆ ವಿಶೇಷ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next